ಬೆಂಗಳೂರು : ಕುರಿ ಕಳ್ಳತನ ತಡೆಯಲು ಕುರುಬರಿಗೆ ಬಂದೂಕು ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಇದು ಅಸಂಬದ್ಧ, ದೋಷಪೂರಿತ ಮತ್ತು ಕುರುಬ ಜಾತಿ ರಾಜಕಾರಣ ಎಂದು ನಟ ಚೇತನ್ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕುರಿ ಕಳ್ಳತನ ತಡೆಯಲು ಕುರುಬರಿಗೆ ಬಂದೂಕು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಿಸಲು ಕೂಡ ಅವಕಾಶ ನೀಡಲು ಮುಂದಾಗಿದ್ದಾರೆ ಇದು ಅಸಂಬದ್ಧ, ದೋಷಪೂರಿತ ಮತ್ತು ಕುರುಬ ಜಾತಿ ರಾಜಕಾರಣ. ಸದೃಢ ಪ್ರಜಾಪ್ರಭುತ್ವಕ್ಕೆ ಪೊಲೀಸ್ ಮತ್ತು ರಕ್ಷಣೆಯ ಅಗತ್ಯವಿದೆಯೇ ಹೊರತು ಬಂದೂಕು ಹೊಡೆಯುವ ಕುರುಬರಲ್ಲ. ಅಲ್ಲದೆ, ಕಾಡುಗಳಲ್ಲಿನ ಮೇಯಿಸುವಿಕೆಯು ಈಗಾಗಲೇ ದುರ್ಬಲವಾಗಿರುವ ನಮ್ಮ ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುತ್ತದೆ. ವಿನಾಶಕಾರಿ-ರಾಮಯ್ಯ ಎಂದು ಬರೆದುಕೊಂಡಿದ್ದಾರೆ.