ನವದೆಹಲಿ: ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಖಾಲಿಸ್ತಾನ ಪರ ಬೆಂಬಲಿಗರು ದಾಳಿ ನಡೆಸಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಎನ್‌ಐಎ ತಂಡ ಇಂದು ಪಂಜಾಬ್‌ನಲ್ಲಿ ಶೋಧ ಕಾರ್ಯ ನಡೆಸಿದೆ.
ದಾಳಿ ಪ್ರಕರಣ ಸಂಬಂಧ ಕಳೆದ ವರ್ಷ ಜೂನ್‌ನಲ್ಲಿ ಎಎನ್‌ಎ ಪ್ರಕರಣ ದಾಖಲು ಮಾಡಿಕೊಂಡಿತ್ತು. ತನಿಖೆಯ ಅಂಗವಾಗಿ ಇಂದು ಪಂಜಾಬ್‌ನಲ್ಲಿ ಎನ್‌ಐಎ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರ ಮಾರ್ಚ್ 23ರಂದು ಕೆನಡಾದ ಒಟ್ಟಾವಾದಲ್ಲಿ ಭಾರತದ ರಾಯಭಾರ ಕಚೇರಿ ಹೊರಗಡೆ ಖಾಲಿಸ್ತಾನ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಭಾರತ ವಿರೋಧ ಘೋಷಣೆ ಕೂಗಿದ್ದ ಖಾಲಿಸ್ತಾನ ಪರ ಬೆಂಬಲಿಗರು, ಭಾರತದ ಹೈಕಮಿಷನ್ ಕಟ್ಟಡಕ್ಕೆ 2 ಗ್ರೆನೇಡ್‌ಗಳನ್ನು ಎಸೆದಿದ್ದರು. ಜೊತೆಗೆ ಗೋಡೆಯ ಮೇಲೆ ಖಾಲಿಸ್ತಾನ ಧ್ವಜಗಳನ್ನು ಕಟ್ಟಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
				
															
                    
                    
                    
                    
                    
































