ನವದೆಹಲಿ : ಕೇಂದ್ರ ಬಜೆಟ್ 2024 ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ಮಂಡಿಸಿದ್ದಾರೆ. ಹಲವು ವಸ್ತುಗಳು ಬೆಲೆ ಇಳಿಕೆಯಾದರೆ, ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ.
ಈ ಪೈಕಿ ಮೊಬೈಲ್, ಚಿನ್ನ, ಬೆಳ್ಳಿ ಸೇರಿದಂತೆ ಪ್ರಮುಖ ವಸ್ತಗಳ ಬೆಲೆ ಇಳಿಕೆಯಾಗಿದೆ.
ಇನ್ನು ಪ್ಲಾಸ್ಟಿಕ್, ಆಮದು ಬಟ್ಟೆ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ.
ಯಾವುದು ಅಗ್ಗ?
ಕ್ಯಾನ್ಸರ್ ಔಷಧಿ, ಮೊಬೈಲ್ ಬೆಳ್ಳಿ-ಬಂಗಾರ, ಪ್ಲಾಟಿನಂ ಮೀನು ಸೇರಿದಂತೆ ಸಮುದ್ರ ಆಹಾರ, ಸೋಲಾರ್ ಶಕ್ತಿ ಬಿಡಿ ಭಾಗ, ಚಪ್ಪಲಿ ಸೇರಿದಂತೆ ಪಾದರಕ್ಷೆ, ಕ್ಯಾಮೆರಾ ಲೆನ್ಸ್, ಎಲೆಕ್ಟ್ರಿಕ್ ವಾಹನ
ಯಾವುದು ದುಬಾರಿ?
ಪ್ಲಾಸ್ಟಿಕ್ – ಫ್ಲೆಕ್ ತೆರಿಗೆ ಹೆಚ್ಚಳ ಪರಿಸರದ ಹಿತದೃಷ್ಟಿಗೆ ಮಾರಕ ಆಮುದು ಬಟ್ಟೆ ಪ್ಲಾಟಿನಂ ಕಸ್ಟಮ್ ತೆರಿಗೆಯನ್ನು ಶೇಕಡಾ 6 ರಷ್ಟು ಇಳಿಕೆ ಮಾಡಲಾಗಿದೆ.
ಮೊಬೈಲ್ ಫೋನ್ ಹಾಗೂ ಚಾರ್ಜರ್ ಮೇಲಿನ ಕಸ್ಟಮ್ ತೆರಿಗೆಯನ್ನು ಶೇಕಡಾ 15 ರಷ್ಟು ಇಳಿಕೆ ಮಾಡಲಾಗಿದೆ.
ಲಿಥಿಯಂ ಇಯಾನ್ ಬ್ಯಾಟರಿ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ. ಇದರಿಂದ ಮೊಬೈಲ್ ಮಾತ್ರವಲ್ಲ, ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಇಳಿಕೆಯಾಗಲಿದೆ
ಇನ್ನು ಕ್ಯಾಮೆರಾ ಲೆನ್ಸ್ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ.ಸಮುದ್ರ ಆಹಾರಗಳಾದ ಮೀನು ಸೇರಿದಂತೆ ಇತರ ಆಗಾರದ ಬೆಲೆಯಲ್ಲಿ ಇಳಿಕೆಯಾಗಲಿದೆ.