ನವದೆಹಲಿ : ದೀಪಾವಳಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) 3% ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ. ಈ ಮೊದಲು, ತುಟ್ಟಿಭತ್ಯೆ (ಡಿಎ) 50% ಆಗಿತ್ತು. ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ 3% ಹೆಚ್ಚಳವು ಜುಲೈ 1, 2024 ರಿಂದ ಅನ್ವಯವಾಗುವಂತೆ DA ಮತ್ತು DR ಅನ್ನು ಮೂಲ ವೇತನದ 53%ಗೆ ಹೆಚ್ಚಿಸುತ್ತದೆ.
