ಲೋಕಸಭೆ ಚುನಾವಣೆ ಹಿನ್ನೆಲೆ, ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸಿದೆ.
ಕರ್ನಾಟಕ ಸೇರಿ ದೇಶಾದ್ಯಂತ ನರೇಗಾ ಯೋಜನೆಯ ದಿನಗೂಲಿಯನ್ನು ಕೇಂದ್ರ ಸರ್ಕಾರವು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಿದ್ದು,ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 349 ರೂ.ಗೆ ಏರಿಕೆಯಾಗಿದೆ.
2024ರ ಏಪ್ರಿಲ್ 1ರಿಂದ ಹೊಸ ದಿನಗೂಲಿಯು ಜಾರಿಗೆ ಬರಲಿದೆ.