ಬೆಂಗಳೂರು: ಕೋವಿಡ್ ಕಾಲದಲ್ಲಿ ಪಿಪಿಇ ಕಿಟ್ ಮತ್ತು ಮಾಸ್ಕ್ ಖರೀದಿಯಲ್ಲಿ ಕೋಟಿ ಕೋಟಿ ಅವ್ಯವಾಹರ ನಡೆದಿದೆ ಅಂದು ಎಫ್ಐಆರ್ ದಾಖಲಾಗಿದೆ. ವೈದ್ಯಾಧಿಕಾರಿಗಳಾದ ಗಿರೀಶ್, ಮಧು ಸೇರಿದಂತೆ laj export, prudent management ಹಾಗೂ ಜನಪ್ರತಿನಿಧಿಗಳ ಮೇಲೆ 167ಕೋಟಿ ದುರ್ಬಳಕೆ ಮಾಡಿರೋ ಆರೋಪ ಹೊರಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿ ಡಾ. ವಿಷ್ಣುಪ್ರಸಾದ್ ವಿಧಾನಸೌವಧ ಠಾಣೆಗೆ ದೂರು ನೀಡಿದ್ರು. ಸದ್ಯ ದೂರಿನ ಹಿನ್ನಲೆ ವಿಧಾನಸೌಧ ಠಾಣೆಯಲ್ಲಿ ಎಫ್ ಆರ್ ದಾಖಲಾಗಿದ್ದು, ವಿಧಾನೌಧ ಪೊಲಿಸರು ದೂರಿಗೆ ಸಂಬಂಧಿಸಿದ ದಾಖಲೆಗಳನ್ನ ಒದಗಿಸುವಂತೆ ದೂರುದಾರ ಡಾ. ವಿಷ್ಣುಪ್ರಸಾದ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣದಲ್ಲಿ 167 ಕೋಟಿ ಅವ್ಯವಾಹರ ನಡೆದಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸುವಂತೆ ಮೇಲಾಧಿಕಾರಿಗಳಿಗೆ ಪತ್ತ ಬರೆದಿದ್ದಾರೆ.
ಈ ಹಿನ್ನೆಲೆ ಸೆಷನ್ ಮುಗಿದ ನಂತರ ಕೋವಿಡ್ ಸ್ಕ್ಯಾಮ್ ತನಿಖೆಗೆ ಪ್ರತ್ಯೇಕ ಎಸ್ಐಟಿ ರಚನೆಯಾಗೋ ಸಾಧ್ಯತೆಯಿದೆ.