ದೆಹಲಿ:ಮಲ್ಲಿಕಾರ್ಜುನ ಖರ್ಗೆ ಅವರು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಶುಕ್ರವಾರ ಆರೋಪಿಸಿರುವ ಚುನಾವಣಾ ಆಯೋಗ ಕಾಂಗ್ರೆಸ್ ಮುಖ್ಯಸ್ಥರು ಮಾಡಿರುವ ದುರಾಡಳಿತ ಮತ್ತು ಮತದಾರರ ಅಂಕಿಅಂಶ ಬಿಡುಗಡೆಯಲ್ಲಿ ವಿಳಂಬ ಆರೋಪವನ್ನು ತಳ್ಳಿಹಾಕಿದೆ.
ಖರ್ಗೆಯವರ ಆರೋಪಗಳು ಅಸಮರ್ಥನೀಯವಾಗಿದ್ದು, ವಾಸ್ತವಾಂಶಗಳಿಲ್ಲದೆ ಮತ್ತು ಗೊಂದಲವನ್ನು ಹರಡುವ ಪಕ್ಷಪಾತ ಮತ್ತು ಉದ್ದೇಶಪೂರ್ವಕ ಪ್ರಯತ್ನದ ಪ್ರತಿಫಲನ ಎಂದು ಚುನಾವಣಾ ಸಂಸ್ಥೆ ಹೇಳಿದೆ.
ಕಾಂಗ್ರೆಸ್ನಿಂದ ಹಿಂದಿನ ಮತ್ತು ಪ್ರಸ್ತುತ ಬೇಜವಾಬ್ದಾರಿ ಹೇಳಿಕೆಗಳ ಸರಣಿಯಲ್ಲಿ ಇದೂ ಒಂದು ಎಂದು ಚುನಾವಣಾ ಆಯೋಗ ಹೇಳಿದೆ . ಇದನ್ನು ‘ಗೊಂದಲದ ಆರೋಪ’ ಎಂದು ಕರೆದ ಆಯೋಗ, ಎಲ್ಲವೂ ಸರಿಯಾಗಿಯೇ ಇದೆ. ಕಾಂಗ್ರೆಸ್ ಅಧ್ಯಕ್ಷರು ಪಕ್ಷಪಾತದ ನಿರೂಪಣೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

































