ನವದೆಹಲಿ: ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕರ ವಿರುದ್ಧ ಖಲಿಸ್ತಾನಿ ಉಗ್ರಗಾಮಿಗಳು ಪ್ರಚಾರ ಸಾಮಗ್ರಿಗಳ ಮೂಲಕ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾರತವು ಕೆನಡಾ ಹೈಕಮಿಷನರ್ ಗೆ ದೆಹಲಿಯಲ್ಲಿ ಸಮನ್ಸ್ ಜಾರಿ ಮಾಡಿದೆ.
ಈ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನ್ ಪರ ಬೆಂಬಲಿಗರು ಭಾನುವಾರ (ಸ್ಥಳೀಯ ಕಾಲಮಾನ) ನಡೆಸಿದ ವಿಧ್ವಂಸಕ ಕೃತ್ಯ ಮತ್ತು ಅಗ್ನಿಸ್ಪರ್ಶ ಪ್ರಯತ್ನವನ್ನು ಅಮೆರಿಕ ಮಂಗಳವಾರ ಬಲವಾಗಿ ಖಂಡಿಸಿದೆ.
ಖಲಿಸ್ತಾನಿ ತೀವ್ರಗಾಮಿಗಳು ಭಾರತೀಯ ದೂತಾವಾಸಕ್ಕೆ ಮುಂಜಾನೆ 1:30 ರಿಂದ 2:30 ರ ನಡುವೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಚಾನೆಲ್ ದಿಯಾ ಟಿವಿ ವರದಿ ಮಾಡಿದೆ. ಆದರೆ ಸ್ಯಾನ್ ಫ್ರಾನ್ಸಿಸ್ಕೋ ಅಗ್ನಿಶಾಮಕ ಇಲಾಖೆ ಅದನ್ನು ತ್ವರಿತವಾಗಿ ನಂದಿಸಿತು ಅಂತ ತಿಳಿದು ಬಂದಿದೆ. ಹಾನಿ ಸೀಮಿತವಾಗಿದ್ದರೂ, ಘಟನೆಯಲ್ಲಿ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಖಲಿಸ್ತಾನ್ ಬೆಂಬಲಿಗರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.