ಕೋಲ್ಕತ್ತಾ : ಖ್ಯಾತ ಗಾಯಕಿ ಉಷಾ ಉತ್ತುಪ್ ಅವರ ಪತಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಸೋಮವಾರ(ಜು.8ರಂದು) ಕೋಲ್ಕತ್ತಾದಲ್ಲಿ ಜಾನಿ ಚಾಕೋ ಉತ್ತುಪ್ (78) ನಿಧನರಾಗಿದ್ದಾರೆ. ತನ್ನ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪ ತ್ರೆ ಗೆ ದಾಖಲು ಮಾಡಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿ ರುವುದಾಗಿ ವೈದ್ಯ ರು ಹೇಳಿದ್ದಾರೆ. ಹಠಾತ್ ಹೃದಯಸ್ತಂಭನದಿಂದ ಅವರು ನಿಧನ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಉಷಾ ಅವರಿಗೆ ಜಾನಿ ಚಾಕೋ ಎರಡನೇ ಪತಿ. ಉಷಾ ಈ ಹಿಂದೆ ರಾಮು ಅವರನ್ನು ಮದುವೆಯಾಗಿದ್ದರು.ಉಷಾ ,ಜಾನಿ ದಂಪತಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ. ಮಂಗಳವಾರ (ಜು.9ರಂದು) ಜಾನಿ ಅವರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.