ಕಾಂಗ್ರೆಸ್ನ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಗೃಹಲಕ್ಷ್ಮಿ  ಯೋಜನೆ. ಇಲ್ಲಿಯವರೆಗೆ ಲಕ್ಷಾಂತರ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲ ಫಲಾನುಭವಿಗಳು ತಾಂತ್ರಿಕ ಸಮಸ್ಯೆಯಿಂದ ಈ ಹಣದಿಂದ
ವಂಚಿತರಾಗಿದ್ದಾರೆ. ಸದ್ಯ ಫಲಾನುಭವಿಗಳಾದವರು ಹಣ ಬಾರದೆ ಇದ್ದಾಗ ಈ ಕ್ರಮಗಳನ್ನು ಅನುಸರಿಸಬೇಕು.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು. ಬಳಿಕ KYC ಗೆ ಸಂಬಂಧಿತ ಎಲ್ಲ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು. ಪಡಿತರ ಚೀಟಿಯಲ್ಲಿ ಕೂಡ ಸರಿಯಾದ ವಿವರಗಳನ್ನು ನವೀಕರಿಸಬೇಕು.
ಹೀಗೆ ಮಾಡಿದಾಗ ಮಾತ್ರ ಫಲಾನುಭವಿಗಳು ಬಾಕಿ ಇರುವ ಕಂತುಗಳನ್ನು ಪಡೆಯಲು ಸಾಧ್ಯವಾಗುತ್ತದೆ.
				
															
                    
                    
                    

































