ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಕ್ರಮ ತೆಗೆದುಕೊಂಡಿದ್ದು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಮಾಡಿದ್ದು. ಜೂನ್ 18ರಂದು 9.26 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ. ಜಮೆ ಆಗಲಿದೆ.
ಒಟ್ಟು 20,000 ಕೋಟಿ ರೂ. ವೆಚ್ಚ ತಲುಪಲಿದೆ. ಮೋದಿಯವರು ಮಂಗಳವಾರ ವಾರಾಣಸಿಗೆ ಭೇಟಿ ನೀಡಿದ ವೇಳೆ ಪಿಎಂ ಕಿಸಾನ್ ಯೋಜನೆಯ 2000 ರೂ.ವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
