ಮುಂಬೈ,ಸೆ : ನಟಿ ಕೀರ್ತಿ ಸುರೇಶ್ ಈಗಲೂ ಚಿತ್ರರಂಗದಲ್ಲಿ ಡಿಮ್ಯಾಂಡ್ ಇದೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಚಾರ್ಮ್ ಉಳಿಸಿಕೊಂಡಿದ್ದಾರೆ. ಇದೀಗ ಜೈಲರ್ ಜವಾನ್ ಸಿನಿಮಾದ ಸಕ್ಸಸ್ಫುಲ್ ಮ್ಯೂಸಿಕ್ ಡೈರೆಕ್ಟರ್ ಜೊತೆ ದಾಂಪತ್ಯ ಜೀವನಕ್ಕೆ ನಟಿ ಕೀರ್ತಿ ಸುರೇಶ್ ಕಾಲಿಡಲಿದ್ದಾರೆ ಸುದ್ದಿ ವೈರಲ್ ಆಗ್ತಿದೆ.
ಜೈಲರ್, ಜವಾನ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ಜೊತೆ ಕೀರ್ತಿ ಮದುವೆಯಂತೆ ಹಾಗಂತ ಕೆಲ ದಿನಗಳಿಂದ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.
ಆದರೆ ಈ ಕುರಿತು ಕೀರ್ತಿ ತಂದೆ ಪ್ರತಿಕ್ರಿಯಿಸಿ, ಅನಿರುದ್ಧ ಜೊತೆ ಕೀರ್ತಿ ಮದುವೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದು ಯಾರೋ ಸೃಷ್ಟಿಸಿದ ವದಂತಿಗಳು, ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.