ಲಕ್ನೋ : ಕಸದ ಟ್ರಕ್ ವೊಂದು ಡಾಬಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಮಾಣಿಕಪುರ ಕ್ರಾಸಿಂಗ್ ಬಳಿ ಶನಿವಾರ ರಾತ್ರಿ ನಡೆದಿದೆ.
ಡಾಬಾವೊಂದಕ್ಕೆ ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಡಾಬಾದಲ್ಲಿ ಕೂತಿದ್ದ ಜನರ ಮೇಲೆಯೇ ಟ್ರಕ್ ಹರಿದಿದೆ. ಡಾಬಾದ ಗೋಡೆ ಹಾನಿಯಾಗಿದ್ದು ಅದರ ಕೆಳಗೆ ಜನ ಸಿಲುಕಿಕೊಂಡಿದ್ದಾರೆ. ಮೂವರು ಮೃತಪಟ್ಟಿದ್ದು ,ಇನ್ನು ಮೂವರು ಗಾಯಗೊಂಡಿದ್ದಾರೆ ಎಂದು ಇಟಾವಾ ಜಿಲ್ಲಾ ಮ್ಯಾಜಿಸ್ಟ್ರೇ ಟ್ ಅವ್ನಿಶ್ ರೈ ಹೇಳಿದ್ದಾರೆ.
ಮಧ್ಯಮ ಸೇವಿಸಿ ಚಾಲನೆ ಮಾಡುತ್ತಿದ್ದ ಟ್ರಕ್ ಚಾಲಕನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.ಘಟನೆಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊತೆಗೆಯಲು ಹರಸಾಹಸ ಪಡೆಬೇಕಾಯಿತು.