ನವದೆಹಲಿ: “ಡಿಸೆಂಬರ್ 13 ರೊಳಗೆ ನಾವು ಸಂಸತ್ ಭವನದ ಮೇಲೆ ದಾಳಿ ಮಾಡುತ್ತೇವೆ “ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತೊಂದು ಬೆದರಿಕೆ ವಿಡಿಯೋ ಬಿಡುಗಡೆ ಮಾಡಿದ್ದಾನೆ. 2021 ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಮೇಲೆ ಉಗ್ರರು ದಾಳಿ ನಡೆಸಿದ್ದರು, ಮುಂಬರುವ 13ಕ್ಕೆ 22 ವರ್ಷ ತುಂಬುತ್ತಿದೆ.
“ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ” ಎಂದು ಅಡಿಬರಹ ಹಾಕಿರುವ ವಿಡಿಯೋದಲ್ಲಿ 2021ರ ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಜಲ್ ಗುರು ಜೊತೆಗಿನ ಪೋಸ್ಟರ್ ಜೊತೆಗೆ ಉಗ್ರ ಗುರುಪತ್ವಂತ್ ಸಿಂಗ್ ಕಾಣಿಸಿಕೊಂಡಿದಾನೆ.
ಭಾರತದ ಏಜೆನ್ಸಿಗಳು ನನ್ನ ಹತ್ಯೆಗೆ ಯತ್ನಿಸಿದ ಸತತ ಪ್ರಯತ್ನ ವಿಫಲವಾಗಿದೆ. ನನ್ನ ವಿರುದ್ಧದ ಸಂಚಿಗೆ ಪ್ರತಿಕ್ರಿಯಿಸುವುದಾಗಿ ಸವಾಲು ಹಾಕಿದ್ದು, ನಾವು ಡಿಸೆಂಬರ್ 13ರ ಒಳಗಾಗಿ ಪಾರ್ಲಿಮೆಂಟ್ ಮೇಲೆ ದಾಳಿ ಮಾಡುತ್ತೇವೆ ಎಂದಿದ್ದಾನೆ.
ಸದ್ಯ ಸಂಸತ್ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನವು ಡಿಸೆಂಬರ್ 22ರವರೆಗೆ ನಡೆಯಲಿದೆ.