ಈ ಯೋಜನೆಯಡಿ ಎಷ್ಟು? ಸಹಾಯಧನ ಪಡೆಯಬಹುದು?
ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆ ಮಾಡಲು ಶೇ 70% ರಷ್ಟು OR 5 ಲಕ್ಷಗಳ ಸಹಾಯಧನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿದಾರರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.10.00 ಲಕ್ಷದ ಒಳಗಿರಬೇಕು.
- ಅರ್ಜಿದಾರರ ವಯಸ್ಸು 30 ರಿಂದ 50 ವರ್ಷ.
- ಅರ್ಜಿದಾರರು ಯಾವುದಾದರೂ ಪದವಿಯ ಜೊತೆಗೆ 10 ವರ್ಷಗಳ ಸೇವಾನುಭವ media ಪಟ್ಟಿಯಲ್ಲಿ ಹೆಸರಿರುವ ಪ್ರಮುಖ ಮಾಧ್ಯಮ ಮುದ್ರಣ / electronic ಮಾಧ್ಯಮದಲ್ಲಿ ಹೊಂದಿರಬೇಕು.
- ಅರ್ಜಿದಾರರು ಈ ಹಿಂದೆ ನಿಗಮಗಳಿಂದ ಯಾವುದೇ ಆರ್ಥಿಕ ಪ್ರಯೋಜನವನ್ನು ಪಡೆದಿರಬಾರದು.
- ಅರ್ಜಿದಾರರು ಕಡ್ಡಾಯವಾಗಿ UAM ನಲ್ಲಿ ನೋಂದಣಿಯಾಗಿರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿ & ಇತರೆ ಸಂಸ್ಥೆಗಳಲ್ಲಿ ಗ್ರೂಪ್-ಎ & ಗ್ರೂಪ್-ಬಿ ವೃಂದದ ಹುದ್ದೆಯಲ್ಲಿರಬಾರದು.
- ಅರ್ಜಿದಾರರು ಪ್ರಾಜೆಕ್ಟ್ ರಿಪೋರ್ಟಗಳೊಂದಿಗೆ ಅರ್ಜಿಯನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವುದು.
- ಘಟಕ ಸ್ಥಾಪಿಸಿದ ಉದ್ಯಮದಲ್ಲಿ ಒಬ್ಬ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಲಾಗುವುದು.
- ಡಿಜಿಟಲ್ ಉದ್ಯಮ ಪ್ರಾರಂಭಿಸುವ ಫಲಾನುಭವಿಯು ಕಡ್ಡಾಯವಾಗಿ ಪರಿಶಿಷ್ಟ ಜಾತಿಯ ಒಬ್ಬ ನಿರುದ್ಯೋಗಿಗೆ 7 month ಕಾಲ digital ಪತ್ರಿಕೋದ್ಯಮ ತರಬೇತಿ ನೀಡಬೇಕು ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಸುದ್ದಿಯನ್ನು ಪ್ರಸಾರ ಮಾಡಬೇಕು.
ನಮೂನೆ ಡೌನ್ಲೋಡ್ ಲಿಂಕ್:
ಆಸಕ್ತರು ಈ Download Now ಲಿಂಕ್ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ವಿಶೇಷ ಸೂಚನೆ: ಬೆಂಗಳೂರು ನಗರ, ಮೈಸೂರು, ದಾರವಾಡ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಕಲಬುರಗಿ, ಬಳ್ಳಾರಿ, ದಾವಣಗೆರೆ, ತುಮಕೂರು, ವಿಜಯಪುರ, ಶಿವಮೊಗ್ಗ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾದ್ಯಮ ಸ್ಥಾಪಿಸಲು ಉದ್ದೇಶಿಸಿರುವವರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 09 ಫೆಬ್ರವರಿ 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26 ಫೆಬ್ರವರಿ 2024