ಬಿಗ್ ಬಾಸ್ ಸೀಸನ್ 10ರಲ್ಲಿ ರನ್ನರ್ ಅಪ್ ಆಗುವ ಮೂಲಕ ಡ್ರೋನ್ ಪ್ರತಾಪ್ ಅ ಸಂಖ್ಯತ ಕನ್ನಡಿಗರ ಮನ ಗೆದ್ದಿದ್ದರು.
ಬಿಗ್‌ಬಾಸ್‌ನಲ್ಲಿ ಬಂದ ಹಣ ಹಾಗೂ ಉಡುಗೊರೆಯನ್ನು ತಾನು ತೆಗೆದುಕೊಳ್ಳದೆ ಅದನ್ನು ಫುಡ್ ಡೆಲಿವರಿ ಮಾಡುವವರಿಗೆ ನೀಡುವುದಾಗಿ ಬಿಗ್‌ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಹೇಳಿದಂತೆ ನಡೆದುಕೊಂಡಿರುವ ಪ್ರತಾಪ್ ತಮಗೆ ಲಭಿಸಿದ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರಾಜು ಎಂಬ ಡೆಲಿವರಿ ಹುಡುಗನಿಗೆ ಕೊಟ್ಟಿದ್ದೇನೆ.
ಸ್ನೇಹಿತ ಮಾಡಿದ ಮೋಸದಿಂದ ಬ್ಯಾಂಕ್‌ನವರು ರಾಜು ಬಳಿಯಿದ್ದ ಬೈಕ್ ಸೀಜ್ ಮಾಡಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.