ಬೆಂಗಳೂರು: ಇದೀಗ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಬಿಜೆಪಿ ನಾಯಕರು ದೇಶಕ್ಕೆ “ಮೋದಿಯೇ ಗ್ಯಾರಂಟಿ” ಎಂದು ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ. ಲೋಕಸಭೆಗೆ ಚುನಾವಣೆ ನಡೆಯುವ ಮುನ್ನದ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ #ModikiGuarantee ಟೆಂಡ್ ಆಗಿದೆ. ದೇಶಕ್ಕೆ ನಮೋ ಗ್ಯಾರಂಟಿ. ಪ್ರಧಾನಿಯಾಗಿ ನರೇಂದ್ರ ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಪೋಸ್ಟ್ ಮಾಡಿದೆ.
![](https://bcsuddi.com/wp-content/uploads/2025/02/WhatsApp-Image-2025-02-05-at-6.18.34-PM.jpeg)