ಉತ್ತರಪ್ರದೇಶ: ನಂಬಿದರೆ ನಂಬಿಯೂಪಿಯ ಫತೇಪುರ್ ಜಿಲ್ಲೆಯಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ವಿಕಾಸ್ ದುಬೆ(24) ಎಂಬಾತನಿಗೆ 35 ದಿನಗಳ ಅವಧಿಯಲ್ಲಿ 6 ಬಾರಿ ಹಾವು ಕಚ್ಚಿದೆ.
ಕಳೆದ 2ನೇ ತಾರೀಖಿನಂದು ಮೊದಲ ಕಚ್ಚುವಿಕೆಯಿಂದ ಆರಂಭವಾದ ಹಾವು 4 ಬಾರಿ ಕಚ್ಚಿದ್ದು, ಭಯದಿಂದ ಅಲ್ಲಿನ ಜನರು ಗ್ರಾಮವನ್ನು ತೊರೆದಿದ್ದಾರೆ. ಇದೇ ತಿಂಗಳ 6ರಂದು 6ನೇ ಬಾರಿ ಹಾವು ಕಚ್ಚಿದೆ. ಕಚ್ಚಿದಾಗಲೆಲ್ಲ ಆಸ್ಪತ್ರೆಗೆ ಕರೆದೊಯ್ದು ಬದುಕುಳಿದಿದ್ದರು. ಇವರಿಗೆ ಕಚ್ಚಿರುವುದು ಒಂದೇ ಹಾವು ಅಥವಾ ಬೇರೆ ಬೇರೆ ಹಾವುಗಳೇ ಎಂಬುದು ತಿಳಿಯಬೇಕಿದೆ.