ಹಾಸನ: ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ವಾಸವಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಡಿಸಿಆರ್ಬಿ ಪೊಲೀಸರು ಬಂಧಿಸಿದ ಘಟನೆ ಹಾಸನ ನಗರದಲ್ಲಿನಡೆದಿದೆ. ಬಂಧಿತರನ್ನು ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಎಂದು ಗುರುತಿಸಲಾಗಿದೆ. ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬವನ ಮನೆಯಲ್ಲಿ ಈ ಮೂವರು ವಾಸವಿದ್ದರು. ಜುಬೇರ್ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ಮೂವರು ಪಶ್ಚಿಮಬಂಗಾಳದ ವಿಳಾಸವಿರುವ ನಕಲಿ ಆಧಾರ್ಕಾರ್ಡ್ ಹೊಂದಿದ್ದರು. ನುಸುಳುಕೋರರನ್ನು ಡಿಸಿಆರ್ಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
