ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತನ್ನ ಬಾಯ್ ಫ್ರೆಂಡ್ ರಾಹುಲ್ ಮೋದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದು, ಬ್ರೇಕ್ ಅಪ್ ವದಂತಿಗಳನ್ನು ಹುಟ್ಟುಹಾಕಿದೆ. ನಟಿ ಶ್ರದ್ಧಾ ಕಪೂರ್ ಅವರು ರಾಹುಲ್ ಸಹೋದರಿಯನ್ನು ಕೂಡ ಅನ್ ಫಾಲೋ ಮಾಡಿದ್ದಾರೆ. ಸ್ಕ್ರಿಪ್ಟ್ರೈಟರ್ ರಾಹುಲ್ ಮೋದಿ ಜೊತೆ ನಟಿ ಶ್ರದ್ಧಾ ಕಪೂರ್ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ವದಂತಿಗಳಿವೆ. ಹಲವು ಈವೆಂಟ್ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾಗ್ಯೂ, ಈವರೆಗೆ ವದಂತಿಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಜೂನ್ನಲ್ಲಿ ಶ್ರದ್ಧಾ, ರಾಹುಲ್ ಮೋದಿ ಅವರೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಬಹುತೇಕ ದೃಢಪಡಿಸಿದ್ದರು. ಅದಾಗ್ಯೂ, ಸ್ಪಷ್ಟ – ಅಧಿಕೃತ ಹೇಳಿಕೆಗಳಿಗೆ ಕಾಯಲಾಗಿತ್ತು. ಫೋಟೋದಲ್ಲಿ ಈ ಜೋಡಿ ಮ್ಯಾಚಿಂಗ್ ವೈಟ್ ಡ್ರೆಸ್ನಲ್ಲಿ ಕಂಗೊಳಿಸಿದ್ದರು. ಫೋಟೋ ಶೇರ್ ಮಾಡಿದ ಚೆಲುವೆ, “ದಿಲ್ ರಖ್ ಲೇ, ನೀಂದ್ ತೋ ವಾಪಸ್ ದೆ ದೆ ಯಾರ್ ” (ನನ್ನ ದಿಲ್ ಇಟ್ಟುಕೊಳ್ಳಿ, ಆದ್ರೆ ನನ್ನ ನಿದ್ರೆಯನ್ನು ಮರಳಿಸಿ) ಎಂದು ಸ್ಮೈಲಿ, ರೆಡ್ ಹಾರ್ಟ್ ಎಮೋಜಿಗಳೊಂದಿಗೆ ಬರೆದುಕೊಂಡಿದ್ದರು. ಜೊತೆಗೆ ರಾಹುಲ್ ಮೋದಿ ಇನ್ಸ್ಟಾ ಐಡಿಗೆ ಟ್ಯಾಗ್ ಮಾಡಿದ್ದರು. ಪೋಸ್ಟ್ ಇಷ್ಕ್ ಚಿತ್ರದ “ನೀಂದ್ ಚುರಾಯೀ ಮೇರಿ” ಹಾಡನ್ನು ಸಹ ಒಳಗೊಂಡಿತ್ತು. ರೊಮ್ಯಾಂಟಿಕ್ ಪೋಸ್ಟ್ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಂಡಿತ್ತು.
