ರಾಜ್ಯ ಸರ್ಕಾರ ನಾಡಿನ ರೈತರಿಗೆ ಗುಡ್‌ನ್ಯೂಸ್ ನೀಡಿದೆ. ಹೌದು ಕೃಷಿ ಕೆಲಸಗಳಿಗೆ ಬಳಸುವ ಸೌರ ಪಂಪ್‌ಸೆಟ್ ಅಳವಡಿಕೆಯನ್ನು ಪ್ರೋತ್ಸಾಹಿಸಲು ನೀಡುವ ಸಹಾಯಧನವನ್ನು ಇನ್ಮುಂದೆ ಶೇ 50ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯಲ್ಲಿ ನೀಡಲಾಗುತ್ತಿದ್ದ ಶೇ.30ರಷ್ಟು ಸಹಾಯಧನವನ್ನು 50ಕ್ಕೆ ಏರಿಸಲಾಗಿದೆ. ‘ಕುಸುಮ್ ಬಿ’ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.