ಇಸ್ಲಾಮಾಬಾದ್: ಸೂಪರ್ ಪವರ್ ಆಗಲು ಭಾರತ ಕನಸು ಕಾಣುತ್ತಿರುವ ಹೊತ್ತಲ್ಲಿ ನಾವು ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ದೊರೆತಿರುವುದು ಒಂದೇ ದಿನ. ಆದರೆ ಇಂದು ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ. ಆದರೆ ನಾವು ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡಿದ್ದೇವೆ. ಆದರೆ ಇಂದು ಜಾತ್ಯತೀತ ರಾಜ್ಯವಾಗಿದೆ. 1973ರಿಂದ ಸಿಐಐನ ಒಂದೇ ಒಂದು ಶಿಫಾರಸ್ಸನ್ನೂ ಜಾರಿಗೆ ತರಲಾಗಿಲ್ಲ. ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.