ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಅಕ್ಕಿ (plastic rice) ಮಾರಾಟದ ಹಾವಳಿ ಹೆಚ್ಚಾಗಿದೆ, ಪ್ಲಾಸ್ಟಿಕ್ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ ಇದನ್ನ ಮೇಲ್ನೋಟಕ್ಕೆ ನೋಡಿದರೆ ಅದು ಪ್ಲಾಸ್ಟಿಕ್ ಅಕ್ಕಿ ಎಂಬುದನ್ನು ಕಂಡುಹಿಡಿಯಲು ಸಾಧ್ಯವೇ ಇಲ್ಲ. ಆದರೆ ಒಂದು ವೇಳೆ ಪ್ಲಾಸ್ಟಿಕ್ ಅಕ್ಕಿಯನ್ನು ನೀವು ತಿನ್ನಲು ಆರಂಭಿಸಿದರೆ ಇದರಿಂದ ಆರೋಗ್ಯದ ಮೇಲೆ ಆಗುವ ಅಪಾಯ ಅಷ್ಟಿಷ್ಟಲ್ಲ. ಇತ್ತೀಚಿಗೆ ದೂರದ ಊರುಗಳಿಗೆ ಪ್ರಯಾಣ ಮಾಡುವವರು ಹಾಗೂ ಟ್ರಕ್ಕಿಂಗ್ (trucking) ಹೋಗುವವರು ಹೆಚ್ಚಾಗಿ ಇಂತಹ ಪ್ಲಾಸ್ಟಿಕ್ ಅಕ್ಕಿಗೆ (plastic rice) ಮಾರುಹೋಗುತ್ತಿದ್ದಾರೆ ಕ್ಷಣಮಾತ್ರದಲ್ಲಿ ಬೇಯಿಸಬಹುದು ಅಥವಾ ಬಿಸಿ ನೀರು ಹಾಕಿದ್ರೆ ಹಾಗೆಯೇ ಸೋಸಿ ತಿನ್ನಬಹುದು ಎನ್ನುವ ಕೆಲವು ಕ್ವಿಕ್ ಪ್ರೊಸೆಸ್ (quick process) ನಿಂದಾಗಿ ಜನ ಪ್ಲಾಸ್ಟಿಕ್ ಅಕ್ಕಿಯನ್ನು ಸೇವಿಸುತ್ತಿದ್ದಾರೆ.
ರಾಸಾಯನಿಕ (chemical) ಮಿಶ್ರಿತ ಪ್ಲಾಸ್ಟಿಕ್ ಅಕ್ಕಿ ಸೇವನೆ ಮಾಡಿದರೆ ದೇಹದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ ಕ್ಯಾನ್ಸರ್ (cancer) ನಂತಹ ದೊಡ್ಡ ಕಾಯಿಲೆಗಳು ಕೂಡ ನಮ್ಮನ್ನು ಆವರಿಸಿಕೊಳ್ಳಲಿವೆ. ಹಾಗಾದ್ರೆ ನಾವು ತಿಂತಾ ಇರೋದು ಪ್ಲಾಸ್ಟಿಕ್ ಅಕ್ಕಿಯೋ ಅಥವಾ ನೈಜ ಅಕ್ಕಿಯೋ ಎಂಬುದನ್ನು ಗುರುತಿಸಿಕೊಳ್ಳುವುದು ಹೇಗೆ? ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ? ಒಂದು ವೇಳೆ ನೀವು ಸೇವನೆ ಮಾಡುತ್ತಿರುವುದು ಪ್ಲಾಸ್ಟಿಕ್ ಅಕ್ಕಿ ಎಂದಾಗಿದ್ದರೆ ಅದನ್ನು ಬೇಯಿಸಲು ಗ್ಯಾಸ್ ಮೇಲೆ ಇಟ್ಟಾಗ ಪಾತ್ರೆಯ ಸುತ್ತಲೂ ದಪ್ಪವಾಗಿರುವ ಪದರ ಏರ್ಪಡುತ್ತದೆ. *ಎರಡನೆಯದಾಗಿ ಪ್ಲಾಸ್ಟಿಕ್ ಅಕ್ಕಿಯನ್ನು ನೀವು ಬೇಯಿಸಲು ನೀರಿಗೆ ಹಾಕಿದ್ರೆ ಅದು ಬೆಂದ ನಂತರವೂ ಗಟ್ಟಿಯಾಗಿ ಇರುತ್ತದೆ, ನಿಜ ಅಕ್ಕಿ ಬೆಂದ ನಂತರ ಬಹಳ ಮೃದುವಾಗಿ ಇರುತ್ತದೆ ಹಾಗೂ ಪ್ಲಾಸ್ಟಿಕ್ ಅಕ್ಕಿಯನ್ನು ಬೇಯಿಸಲು ತುಂಬಾ ಸಮಯವು ಬೇಕು. *ಪ್ಲಾಸ್ಟಿಕ್ ಅಕ್ಕಿ ಎಂಬುದನ್ನು ಗುರುತಿಸಲು ಮತ್ತೊಂದು ಮಾರ್ಗವಿದೆ, ನೀವು ಬೇಯಿಸಿದ ಅನ್ನವನ್ನು ಒಂದು ಪಾತ್ರೆಯಲ್ಲಿ ಹಾಕಿಡಿ ಸುಮಾರು ಎರಡರಿಂದ ಮೂರು ದಿನಗಳ ಕಾಲ ಬಿಟ್ಟು ನೋಡಿ ಆಗ ಅಕ್ಕಿಯ ಸುತ್ತ ಫಂಗಸ್ (fungus) ಬಾರದೆ ಇದ್ದಲ್ಲಿ ಅದು ನೈಜವಾದ ಅಕ್ಕಿ ಅಲ್ಲ ಎಂದೇ ಅರ್ಥ.
ಪ್ಲಾಸ್ಟಿಕ್ ಅಕ್ಕಿ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮತ್ತೊಂದು ಮಾರ್ಗ ಅಂದ್ರೆ ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಬಿಸಿ ಬಿಸಿ ಆಗಿರುವ ಎಣ್ಣೆಯನ್ನು ಸುರಿಯಿರಿ. ಅದು ಪ್ಲಾಸ್ಟಿಕ್ ಆಗಿದ್ದರೆ ತಕ್ಷಣವೇ ಕರಗುತ್ತದೆ. ನೈಜ ಅಕ್ಕಿ ಆಗಿದ್ದರೆ ಅಕ್ಕಿಯಲ್ಲಿ ಯಾವ ಬದಲಾವಣೆಗಳು ಕೂಡ ಆಗುವುದಿಲ್ಲ. ಪ್ಲಾಸ್ಟಿಕ್ ಅಕ್ಕಿ ಜೈವಿಕ ವಿಘಟನೆಯಾಗದ, ಉದರದಲ್ಲಿ ಜೀರ್ಣವಾಗದ ವಸ್ತು. ನೋಟಕ್ಕೆ ನೈಜ ಅಕ್ಕಿಯಂತೆ ಕಂಡರು ಪ್ಲಾಸ್ಟಿಕ್ ಅಕ್ಕಿ ರಾಸಾಯನಿಕದಿಂದ ಕೂಡಿರುತ್ತದೆ. ನೀವು ನಿಜ ಅಕ್ಕಿಯನ್ನು ಬೇಯಿಸಿದ ನಂತರ ಅನ್ನಕ್ಕೆ ಒಂದು ನೈಜವಾದ ಸುವಾಸನೆ ಇರುತ್ತದೆ, ಆದರೆ ಪ್ಲಾಸ್ಟಿಕ್ ಅಕ್ಕಿ ಯಾವ ಸುವಾಸನೆಯನ್ನು ನೀಡುವುದಿಲ್ಲ, ಬದಲಾಗಿ ರಾಸಾಯನಿಕದ ವಾಸನೆ ನಿಮ್ಮ ಗಮನಕ್ಕೆ ಬರಬಹುದು. ಹಾಗಾಗಿ ಅಕ್ಕಿ ಖರೀದಿಸುವ ಮುನ್ನ ಅಕ್ಕಿಯನ್ನು ಪರಿಶೀಲಿಸಿ. ಪ್ಯಾಕೆಟ್ ಅಕ್ಕಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ, ಆದ್ದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವಾಗ ಹೆಚ್ಚಿನ ಗಮನ ವಹಿಸುವುದು ಬಹಳ ಮುಖ್ಯ.