ಬೆಂಗಳೂರು: ಪಕ್ಷಕ್ಕೆ ಯಾರನ್ನೇ ಕರೆತರುವಾಗ ಯೋಚಿಸಿ, ಯೋಗ್ಯವಾದವರನ್ನು ಕರೆತರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರು, ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ಯಾರನ್ನೇ ಪಕ್ಷಕ್ಕೆ ಕರೆತರುವಾಗ ಯೋಚಿಸಿ, ಯೋಗ್ಯವಾದವರನ್ನು ಕರೆತರಬೇಕು ಎಂದರು.
ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗಲೂ ಗುಣಮಟ್ಟವನ್ನು ಅಳೆದು-ತೂಗಿ ಖರೀದಿ ಮಾಡುತ್ತೇವೆ. ಅದೇ ರೀತಿ, ಪಕ್ಷಕ್ಕೆ ಯಾರನ್ನಾದರೂ ಕರೆತರುವಾಗ, ಅವರ ಹಿನ್ನೆಲೆ, ನಂಬಿರುವ ಸಿದ್ಧಾಂತಗಳನ್ನು ನೋಡಿ ಕರೆತರಬೇಕು. ಸುಮ್ನೆ ಹಾಗೆ ಬಂದ್ರು, ಹೀಗೆ ಹೋದ್ರು ಅಂತ ಆಗಬಾರದು ಎಂದು ಜಗದೀಶ ಶೆಟ್ಟರ್ ಹೆಸರು ಪ್ರಸ್ತಾಪಿಸದೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.