ಚಿತ್ರದುರ್ಗ: ಹೊಸದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದೋಬಿ, ಇಸ್ತ್ರಿ ಸೇವೆ, ಹಳೆ ಪಾತ್ರೆಗಳ ವ್ಯಾಪಾರ, ಬಡಗಿ, ಬೀದಿರಿನ ಬುಟ್ಟಿ, ಬೊಂಬು, ಏಣಿ ವ್ಯಾಪಾರ, ಹೂವಿನ ಕುಂಡಗಳ ವ್ಯಾಪಾರ, ಆಹಾರ ತಯಾರಿಸಿ ಮಾರಾಟ ಮಾಡುವರು (ಕ್ಯಾಟರಿಂಗ್), ದಿನಪತ್ರಿಕೆ ಹಂಚಿಕೆ ಮತ್ತು ಹಾಲು ಮಾರಾಟ ಮಾಡುವವರು ಪಿಎಂ-ಸ್ವನಿಧಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು, ರೇಷನ್ ಕಾರ್ಡ್, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ವ್ಯಾಪಾರ ಮಾಡುತ್ತಿರುವ ಸ್ಥಳದ ಫೋಟೋ, ಪಾಸ್ ಫೋಟೋ ಸೈಜ್ ಫೋಟೋ-2, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆಗಳೊಂದಿಗೆ ಹೊಸದುರ್ಗ ಪುರಸಭಾ ಕಾರ್ಯಾಲಯದ ಡೇ-ನಲ್ಮ್ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಹೊಸದುರ್ಗ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.