ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪದಡಿ ವಿಶೇಷ ತನಿಕಾ ದಳದ (SIT) ವಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯ ಜೂನ್ 6ರವರೆಗೆ ಎಸ್ಐಟಿ ವಶಕ್ಕೆ ನೀಡಿದೆ.
ಪ್ರಜ್ವಲ್ ರೇವಣ್ಣ ಬಂಧನದ ಬಗ್ಗೆ ಲೋಕಸಭಾ ಸ್ಪೀಕರ್ ಅವರಿಗೆ ಎಸ್ಐಟಿ ಇಮೇಲ್ ಹಾಗೂ ರೆಸಿಡೆಂಟ್ ಕಮಿಷನರ್ ಕರ್ನಾಟಕ ಭವನ, ದೆಹಲಿ ಮುಖಾಂತರ ಪತ್ರ ರವಾನೆ ಮಾಡಿದ್ದಾರೆ.