ಖರ್ಜೂರವು ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಇದೊಂದು ಡ್ರೈಫ್ರೂಟ್ಸ್ ಆಗಿದ್ದು, ನಿಮಗೆ ಸಕ್ಕರೆಭರಿತ ಆಹಾರ ತಿನ್ನಲು ಇಷ್ಟವಿಲ್ಲದಿದ್ದರೆ, ನೈಸರ್ಗಿಕ ಸಿಹಿತಿಂಡಿಗಾಗಿ ನೀವು ಖರ್ಜೂರವನ್ನು ತಿನ್ನಬಹುದು.
ಇದರ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದ್ದು, ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಖರ್ಜೂರವು ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ ಮುಖದ ಕಾಂತಿ ಹೆಚ್ಚಳಕ್ಕೆ ಪ್ರತಿದಿನ ಎರಡೆರೆಡು ಕರ್ಜೂರವನ್ನು ಸೇವಿಸಿ. ಮುಖದ ಮೇಲೆ ಮೂಡುವ ನೆರಿಗೆ ಕಡಿಮೆ ಮಾಡುತ್ತದೆ.
ಹೃದಯ ಆರೋಗ್ಯಕ್ಕೆ ಕರ್ಜೂರ ಸೇವಿಸಿ. ರಾತ್ರಿ ನೀರಿನಲ್ಲಿ ಕರ್ಜೂರವನ್ನು ನೆನೆಸಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ತಿನ್ನಿ. ಖರ್ಜೂರದಲ್ಲಿ ಆಹಾರದ ಫೈಬರ್‌ನ ಅಂಶ ಹೆಚ್ಚಾಗಿರುವುದರಿಂದ ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.ಮಲಬದ್ಧತೆ ಸಮಸ್ಯೆ ಇರುವವರು ಖರ್ಜೂರವನ್ನು ತಿನ್ನುವುದು ಒಳ್ಳೆಯದು.
ಖರ್ಜೂರವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಮಧುಮೇಹದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಇದು ಬಹಳಷ್ಟು ಸಹಾಯ ಮಾಡುತ್ತದೆ. ಕರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಳವಾಗಿದೆ. ಹೀಗಾಗಿ ಇದನ್ನ ಸೇವಿಸಿದರೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ನಂತಹ ಖನಿಜಗಳಿವೆ, ಇದು ಮೂಳೆಗಳನ್ನು ದೃಢವಾಗಿಸಲು ಅವಶ್ಯಕವಾಗಿದೆ. ಈ ಖನಿಜಗಳು ಮೂಳೆಯ ಆರೋಗ್ಯ ಮತ್ತು ಸಾಂದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.