ಮಾಲೆ : ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಲ್ಡೀವ್ಸ್ ನ ಮೂವರು ಮಂತ್ರಿಗಳು ನೀಡಿರುವ ಅವಹೇಳನಕಾರಿ ಹೇಳಿಕೆಗಳ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿದೆ.
ಇದರ ಪರಿಣಾಮ ಮಾಲ್ಡೀವ್ಸ್ ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಾರಂಭಿಸಿದೆ. ಪ್ರವಾಸಿಗರಿಲ್ಲದೆ ಮಾಲ್ಡೀವ್ಸ್ ನಷ್ಟ ಅನುಭವಿಸುತ್ತಿದೆ. ಇದರಿಂದಾಗಿ ಇದೀಗ ಮಾಲ್ಡೀವ್ಸ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಪ್ರವಾಸಿಗರನ್ನು ಓಲೈಸಲು ಮಾಲ್ಡೀವ್ಸ್ ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸಲಿದೆಯಂತೆ. ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ಅಂಡ್ ಟೂರ್ ಆಪರೇಟರ್ಸ್ ಅದರ ಪ್ರಮುಖ ಪ್ರವಾಸೋದ್ಯಮ ಸಂಸ್ಥೆಯು ಈ ಘೋಷಣೆ ಮಾಡಿದೆ. ಆದರೆ, ಯಾವ ಯಾವ ನಗರಗಳಲ್ಲಿ ಮತ್ತು ಯಾವಾಗ ರೋಡ್ ಶೋ ನಡೆಯಲಿದೆ ಎಂಬ ಮಾಹಿತಿ ನೀಡಿಲ್ಲ.
ಭಾರತೀಯ ಪ್ರವಾಸಿಗರ ಕೊರತೆಯ ನಡುವೆ, ಎರಡು ದೇಶಗಳ ನಡುವಿನ ಪ್ರಯಾಣ ಮತ್ತು ಪ್ರವಾಸೋದ್ಯಮ ಸಹಕಾರವನ್ನು ಹೆಚ್ಚಿಸುವ ಕುರಿತು ಭಾರತದ ಹೈಕಮಿಷನರ್ ಮುನು ಮಹಾವರ್ ಅವರೊಂದಿಗೆ ಮಾಟಾಟೊ ಚರ್ಚಿಸಿದರು. ಭಾರತದ ಬಹಿಷ್ಕಾರವು ಮಾಲ್ಡೀವ್ಸ್ನ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದೆ, ವಿಶೇಷವಾಗಿ ಪ್ರವಾಸೋದ್ಯಮ, ಇದು ಮಾಲ್ಡೀವ್ಸ್ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಬಹಿಷ್ಕಾರದಿಂದಾಗಿ ಮಾಲ್ಡೀವ್ಸ್ ಭಾರೀ ನಷ್ಟವನ್ನು ಅನುಭವಿಸಿದೆ. ಅನೇಕ ಸೆಲೆಬ್ರಿಟಿಗಳು ಸೇರಿದಂತೆ ಭಾರತೀಯರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

































