ಇದೀಗ ಕಾಂತಾರ 2 ನೇ ಭಾಗ ಚಿತ್ರದ ಬಗ್ಗೆ ಈಗಾಗಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಘೋಷಣೆ ಮಾಡಿದ್ದು ರಿಷಬ್ ಶೆಟ್ಟಿ ಮತ್ತು ತಂಡ ಈಗಾಗಲೇ ಚಿತ್ರ ಕಥೆಯ ಬರವಣಿಗೆಯನ್ನು ಪೂರ್ಣಗೊಳಿಸಿ ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿದೆ.
ಬೆಂಗಳೂರು : ಕಳೆದ ವರ್ಷ ದೇಶಾದ್ಯಂತ ಸುನಾಮಿ ಸೃಷ್ಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಸಿನಿಮಾದ ಬಗ್ಗೆ ನಿಮಗೆ ಹೇಳಬೇಕಾದುದು ಏನೂ ಇಲ್ಲ.
ಆದ್ರೆ ಇದೇ ಸಿನಿಮಾದ ಮುಂದುವರೆದ ಭಾಗ ಕಾಂತಾರ 2 ಬಗ್ಗೆ ಕುತೂಹಲ ಹೆಚ್ಚಾಗಿದೆ.
ಕಾಂತಾರ ಕನ್ನಡದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದರೂ ಬಿಡುಗಡೆಯಾಗಿ ಸಿನಿಮಾ ಜಗತ್ತನ್ನು ಬೆಚ್ಚಿಬೀಳಿಸಿತ್ತು.
16 ಕೋಟಿಗಳ ಅತ್ಯಲ್ಪ ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ 400 ಕೋಟಿಗಳನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿತ್ತು,
ನಮ್ಮ ಕರಾವಳಿ ಕುಂದಾಪುರದ ಯುವ ನಟ ರಿಷಬ್ ಶೆಟ್ಟಿಯನ್ನು ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಚಾರ್ಟ್ನಲ್ಲಿ ಅಗ್ರ ನಟ ಮತ್ತು ನಿರ್ದೇಶಕನಾಗಿ ಸ್ಥಾಪಿಸಿತು ಇದೀಗ ಇತಿಹಾಸ.ಆದ್ರೆ ಇದೀಗ ಕಾಂತಾರ 2 ನೇ ಭಾಗ ಚಿತ್ರದ ಬಗ್ಗೆ ಈಗಾಗಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಘೋಷಣೆ ಮಾಡಿದ್ದು ರಿಷಬ್ ಶೆಟ್ಟಿ ಮತ್ತು ತಂಡ ಈಗಾಗಲೇ ಚಿತ್ರ ಕಥೆಯ ಬರವಣಿಗೆಯನ್ನು ಪೂರ್ಣಗೊಳಿಸಿ ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿದೆ.
ಬಲ್ಲ ಮೂಲಗಳ ಪ್ರಕಾರ ಕಾಂತಾರ 2 ಚಿತ್ರದ ಶೂಟಿಂಗ್ ಇದೇ ವರ್ಷ ನವೆಂಬರ್ ಮೊದಲ ವಾರಲ್ಲಿ ಆರಂಭವಾಗಲಿದೆ ಎನ್ನಲಾಗಿದೆ.
ಕಾಂತಾರ ಮೊದಲ ಭಾಗವನ್ನು ರಿಷಬ್ ಶೆಟ್ಟಿ ಹುಟ್ಟೂರು ಉಡುಪಿಯ ಕುಂದಾಪುರದಲ್ಲಿ ಚಿತ್ರೀಕರಿಸಿದ್ದರೆ, ಕಾಂತಾರ 2 ಚಿತ್ರೀಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಲು ನಿರ್ಧರಿಸಲಾಗಿದೆ.
ಅರಣ್ಯ ಪ್ರದೇಶ ಮತ್ತು ನೀರು ಹೆಚ್ಚಾಗಿ ಬೇಕಾದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಚಿತ್ರ ತಂಡ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಸ್ಥಳಗಳಿಗೆ ಭೇಟಿ ನೀಡಿ ಆಯ್ಕೆ ಮಾಡಿದೆ. ನವೆಂಬರ್ ನಲ್ಲಿ ಆರಂಭವಾಗಿ ನಾಲ್ಕು ತಿಂಗಳ ಶೆಡ್ಯೂಲ್ನಲ್ಲಿ ಚಿತ್ರದ ಶೂಟಿಂಗ್ ಮುಗಿಸಲು ಚಿತ್ರ ತಂಡ ನಿರ್ಧರಿಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ದೈವ ಇಚ್ಚೆಯಂತೆ 2024 ರ ವರ್ಷದ ಕೊನೆಯ ತಿಂಗಳಲ್ಲಿ ಚಿತ್ರ ತೆರೆಗೆ ತರುವ ಲೆಕ್ಕಚಾರಗಳನ್ನು ಚಿತ್ರ ತಂಡ ಹೊಂದಿದೆ.
ಜನತೆ ಕೂಡ ಕಾಂತಾರ 2 ಬಗ್ಗೆ ಜಾಸ್ತಿ ನಿರೀಕ್ಷೆ ಇಟ್ಟುಕೋಮಡದ್ದರಿಂದ ಸಹಜವಾಗಿಯೇ ಬಜೆಟ್ ಕೂಡ 100 ಕೋಟಿ ದಾಟಲಿದೆ ಎಂದು ಹೇಳಲಾಗಿದೆ.