ಬೆಂಗಳೂರು: ಬಿಬಿಎಂಪಿಯಿಂದ 11,307 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮೇ.15ರ ವರೆಗೆ ಅವಕಾಶ ನೀಡಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೇರಪಾವತಿಯಡಿ (DPS) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ ಸೃಜಿಸಿರುವ 11,307 ಸಂಖ್ಯಾತಿರಿಕ್ತ (Supernumerary posts) ಹುದ್ದೆಗಳನ್ನು ಸರ್ಕಾರದ ಆದೇಶ ಸಂಖ್ಯೆ: ನಅಇ 165 ಬಿಬಿಎಲ್ 2022(ಇ), ದಿನಾಂಕ: 02.03.2023, ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ: ನಇ 165 ಬಿಬಿಎಲ್ 2022 (ಭಾ-1), ದಿನಾಂಕ: 28.03.2023 ಹಾಗೂ ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ: ನಅಇ 165 ಬಿಬಿಎಲ್ 2022 (ಭಾ-1), ದಿನಾಂಕ: 04.03.2024ರ ಅನ್ವಯ ಭರ್ತಿ ಮಾಡಲು ಅಧಿಸೂಚನೆ ಸಂಖ್ಯೆ: ಸ.ಅ(ನೆ/ವಿ)ಪಿಆರ್/45 & 46/2023-24, ದಿನಾಂಕ: 14.03.2024ರಂತೆ ಉಳಿಕೆ ಮೂಲ ವೃಂದ (RPC) ಹುದ್ದೆಗಳ ಸಂಖ್ಯೆ 10402 ಮತ್ತು ಸ್ಥಳೀಯ ಮೂಲ ವೃಂದ (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ: 905 ಒಟ್ಟು 11,307 ಪೌರಕಾರ್ಮಿಕರ ಹುದ್ದೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಡಿಯಲ್ಲಿನ ತ್ಯಾಜ್ಯ ನಿರ್ವಹಣೆ ಕಾರ್ಯಗಳಲ್ಲಿ ಹಾಲಿ ನೇರಪಾವತಿ ಅಥವಾ ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ (ಪೌರಕಾರ್ಮಿಕರು) ಆಧಾರದ ಮೇಲೆ ಕನಿಷ್ಟ 02 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ, ಸೇವೆಯನ್ನು ಸಲ್ಲಿಸಿರುವ ಹಾಗೂ ಸದರಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ (ಅಂದರೆ ದಿನಾಂಕ: 02.03.2023) ಕಾರ್ಯ ನಿರ್ವಹಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 15.03.2024 ಬೆಳಿಗ್ಗೆ 10:00 ಗಂಟೆಯಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.05.2024 ಸಂಜೆ 5:30 ರವರೆಗೆ (ಸಾರ್ವತ್ರಿಕ ರಜೆಯ ದಿನ ಹೊರತುಪಡಿಸಿ)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಾಲಿಕೆಯ ಆಯಾ ವಾರ್ಡ್ಗೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಘನತ್ಯಾಜ್ಯರವರಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅದೇ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಘನತ್ಯಾಜ್ಯ)ರವರಿಗೆ ಮಾತ್ರ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ವೆಬ್ ಸೈಟ್ www.bbmp.gov.in ನಲ್ಲಿ ವಿವರ ಪಡೆಯಬಹುದಾಗಿದೆ.
ಬಿಬಿಎಂಪಿಯಲ್ಲಿ 11,307 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!