ಬೆಂಗಳೂರು: ಬಾಬುಸಾಬ್ ಪಾಳ್ಯ ಕಟ್ಟಡ ದುರಂತ ಪ್ರಕರಣದ ಬಳಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆಡಿದ್ದು, ಸರ್ಕಾರದ ಸೂಚನೆಯ ಹಿನ್ನೆಲೆ ಇಂದಿನಿಂದ ಕಟ್ಟಡ ಸ್ಯಾಟ್ ಲೈಟ್ ಸರ್ವೆ ಶುರುವಾಗಲಿದೆ. ಪಾಲಿಕೆಯಿಂದ ಅನಧಿಕೃತ ಕಟ್ಟಡದ ಸ್ಯಾಟ್ ಲೈಟ್ ಸರ್ವೆ ಮೂರು ವಿಧಾನದಲ್ಲಿ ಸರ್ವೆ ಮಾಡಲ್ಲಿದ್ದು, ನಕ್ಷೆ ಮಂಜೂರಾತಿ, ಪರವಾನಾಗಿ ಬಗ್ಗೆ ಪರಿಶೀಲನೆ ಎರಡನೇ ಹಂತವಾಗಿ ಸಿಬ್ಬಂದಿ ಮೂಲಕ ಸರ್ವೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಫೋಟೋ ವಿಡಿಯೋ ಸಂಗ್ರಹಿಸಿ ಪರಿಶೀಲನೆ ನಡೆಯಲಿತ್ತು. ಹೊಸ ಆಪ್ ಪರಿಚಯಿಸಲು ಪಾಲಿಕೆ ಚಿಂತನೆ ಮಾಡುತ್ತಿದೆ. ಇನ್ನು ಮೂರನೇ ಹಂತವಾಗಿ ಸ್ಯಾಟಲೈಟ್ ಮೂಲಕ ಸರ್ವೆ ನಡೆಯಲಿದ್ದು, ವರ್ಷದ ಹಿಂದೆ ಖಾಲಿ ಜಾಗ ಇದ್ದು, ಈಗ ಕಟ್ಟಡದ ನಿರ್ಮಾಣವಾಗಿದೆಯಾ ? ಎಂದು ಸ್ಯಾಟಲೈಟ್ ಸರ್ವೆ ನಡೆಸಲಿತ್ತು ಒಂದು ವೇಳೆ ಕಟ್ಟಡ ನಿರ್ಮಾಣ ಆಗಿದ್ದಲ್ಲಿ ಕೂಡಲೇ ವಶಕ್ಕೆ ಪಡೆಯಲಿದೆ ಪಾಲಿಕೆ. ಇನ್ನು ಕಾಲೇಜ್ ಜಾಗ ಮತ್ತು ಕಟ್ಟಡದ ನಿರ್ಮಾಣ ಫೋಟೋ ಪರಿಶೀಲನೆ ಮಾಡಿಲಿದ್ದು, ಪರಿಶೀಲನೆ ವೇಳೆ ಅನಾದಿಕೃತ ಅನ್ನೋದು ಖಚಿತವಾದಲ್ಲಿ ಆ ಕಟ್ಟಡವನ್ನು ಪಾಲಿಕೆ ವಶಕ್ಕೆ ಪಡೆಯಲಿದೆ. ಇನ್ನು ಅನಧಿಕೃತ ಕಟ್ಟಡಗಳನ್ನು ವಲಯ ಆಯುಕ್ತರು ಕೂಡ ವಿಷಯಕ್ಕೆ ಪಡೆಯುವ ಅಧಿಕಾರ ಹೊಂದಿದ್ದಾರೆ. ಇಂದಿನಿಂದ ಶುರುವಾಗುವ ಸರ್ವೆ ನವೆಂಬರ್ 15 ರ ಒಳಗೆ ಅನಧಿಕೃತ ಕಟ್ಟಡಗಳ ತೆಲುಗು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
