ಬೆಂಗಳೂರು : ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ವಂಚಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ತೃಪ್ತಿ ಹೆಗಡೆ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಅರ್ಜಿಯ ವಿಚಾರಣೆ ನಡೆಸಿದ ನಗರದ 37ನೇ ಎಸಿಎಂಎಂ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶಿಸಿತ್ತು.ಅದರನ್ವಯ ಅರುಣ್ ಸೋಮಣ್ಣ, ಜೀವನ್ ಕುಮಾರ್ ಹಾಗೂ ಪ್ರಮೋದ್ ರಾವ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 506, 34, 504, 387, 420, 477A, 323, 327,347 ಹಾಗೂ 354 (ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ, ಅಪಹರಣ) ಮತ್ತಿತರ ಆರೋಪಗಳಡಿ ಸಂಜಯ್ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರುದಾರೆಯಾದ ತೃಪ್ತಿ ಹಾಗೂ ಮಧ್ವರಾಜ್ ಎಂಬುವವರು ಸುಮಾರು 23 ವರ್ಷಗಳಿಂದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದು, 2013ರಲ್ಲಿ ಸರಕಾರಿ ಕಾರ್ಯಕ್ರಮವೊಂದನ್ನ ಆಯೋಜಿಸಿದ್ದಾಗ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರ ಪರಿಚಯವಾಗಿತ್ತು. 2017ರಲ್ಲಿ ಅರುಣ್ ಸೋಮಣ್ಣ ಪುತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮವನ್ನ ಆಯೋಜಿಸುವ ಜವಾಬ್ಧಾರಿಯನ್ನ ಮಧ್ವರಾಜ್ ಒಡೆತನದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೇ ನಿರ್ವಹಿಸಿತ್ತು. ಉತ್ತಮ ಬಾಂಧವ್ಯವಿದ್ದಿದ್ದರಿಂದ ಅರುಣ್ ಸೋಮಣ್ಣ ಸಲಹೆ ಮೇರೆಗೆ 2019ರಲ್ಲಿ ಅರುಣ್ ಮತ್ತು ಮಧ್ವರಾಜ್ ಜಂಟಿಯಾಗಿ ನೈಬರ್ ಹುಡ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಪಾರ್ಟನರ್ ಶಿಪ್ ಡೀಡ್ ಆಧಾರದಲ್ಲಿ ಆರಂಭಿಸಿದ್ದರು. ಕಂಪನಿಯಲ್ಲಿ ಮಧ್ವರಾಜ್ ಹೂಡಿಕೆ ಮಾಡಿರದ ಕಾರಣದಿಂದ ಹೂಡಿಕೆ, ಪಾವತಿಯ ಜವಾಬ್ದಾರಿಯನ್ನ ಅರುಣ್ ಸೋಮಣ್ಣ ಅವರೇ ವಹಿಸಿಕೊಂಡಿದ್ದರು. ನಂತರ ವ್ಯವಹಾರದಲ್ಲಿ ನಷ್ಟವಾದಾಗ ಮಧ್ವರಾಜ್, ಅರುಣ್ ಬಳಿ ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಲಿಲ್ಲ. ಇದಾದ ಬಳಿಕ ಅರುಣ್, ಮಧ್ವರಾಜ್ ಅವರನ್ನು ಕಂಪನಿಯ ಪಾಲುದಾರಿಕೆಗೆ ರಾಜೀನಾಮೆ ಕೊಡುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಂಪನಿಗೆ ಹೊಸ ಪಾಲುದಾರರನ್ನು ಸೇರ್ಪಡೆ ಮಾಡಿಕೊಂಡು ಮಧ್ವರಾಜ್ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಯಲ್ಲಿ ಮಧ್ವರಾಜ್ ಅವರ ಲಾಭಾಂಶದ ಪ್ರಮಾಣವನ್ನು ಶೇ.30ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿತ್ತು.ಕಂಪನಿಯ ಕಚೇರಿ ಇರುವ ಜಾಗದ ಲೀಸ್ ಆಗ್ರಿಮೆಂಟ್ ಬದಲಾವಣೆ, ನಕಲಿ ದಾಖಲೆ ಬಳಸಿ ನೋಂದಣಿ ಹೀಗೆ ಹಲವು ಅಕ್ರಮಗಳನ್ನು ಎಸಗಲಾಗಿದೆ. ಗೂಂಡಾಗಳನ್ನ ಬಿಟ್ಟು ಮಧ್ವರಾಜ್ ಅವರನ್ನ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ’ ಎಂದು ತೃಪ್ತಿ ಅವರು ದೂರು ನೀಡಿದ್ದಾರೆ. ಸದ್ಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಆರೋಪಿತರ ವಿರುದ್ಧ ಜಾಮೀನು ರಹಿತ ಸೆಕ್ಷನ್ ಗಳಿರುವುದರಿಂದ ಸಚಿವ ಸೋಮಣ್ಣ ಅವರ ಪುತ್ರನಿಗೆ ಬಂಧನದ ಭೀತಿ ಎದುರಾಗಿದೆ.
ಬೆಂಗಳೂರು : ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ವಂಚನೆ ಪ್ರಕರಣ ದಾಖಲು
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಬ್ಯೂಟಿಫುಲ್ ಹಿರೋಯಿನ್ ಈಗ ಪವರ್ ಪುಲ್ IPS ಅಧಿಕಾರಿ
25 December 2024
22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಸಫಿನ್ ಹಸನ್
25 December 2024
ನಿಮ್ಮ ಸಂಗಾತಿ ನಡುವೆ ಶಾಂತಿಭಂಗ ತರುವ `ಮದ್ಯ ಪ್ರೇಮಿ ಉಚ್ಟಾಟಣ ತಂತ್ರ’.!
25 December 2024
ಚಳಿಗಾಲದಲ್ಲಿ ನೆನಸಿದ ಶೇಂಗಾ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
25 December 2024
ಚಿನ್ನದ ಗಣಿಗಾರಿಕೆ ಪುನರಾರಂಭಿಸಲು ಶಾಸಕ ವೀರೇಂದ್ರ ಪಪ್ಪಿ ಮನವಿ
25 December 2024
ಮಳೆ ನೀರು ಕೊಯ್ಲು ವಿಧಾನ ಕಡ್ಡಾಯ.!
25 December 2024
LATEST Post
ಪಶ್ಚಿಮ ಘಟ್ಟ: 153.80 ಚ.ಕಿ.ಮೀ. ಅರಣ್ಯ ಪ್ರದೇಶ ನಾಶ; ಶಿವಮೊಗ್ಗ ಜಿಲ್ಲೆಗೆ ಮೊದಲ ಸ್ಥಾನ
25 December 2024
10:54
ಬ್ಯೂಟಿಫುಲ್ ಹಿರೋಯಿನ್ ಈಗ ಪವರ್ ಪುಲ್ IPS ಅಧಿಕಾರಿ
25 December 2024
10:37
150 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ: Chikkodi ಮೂಲದ ಯೋಧ ಸೇರಿ ಐವರು ಹುತಾತ್ಮ.!
25 December 2024
10:22
22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಸಫಿನ್ ಹಸನ್
25 December 2024
09:49
ಕ್ರಿಸ್ಮಸ್ ಹಬ್ಬದ ಶುಭಾಶಯಗಳು: ಕ್ರಿಸ್ಮಸ್ ಹಬ್ಬ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ
25 December 2024
09:20
ನಿಮ್ಮ ಸಂಗಾತಿ ನಡುವೆ ಶಾಂತಿಭಂಗ ತರುವ `ಮದ್ಯ ಪ್ರೇಮಿ ಉಚ್ಟಾಟಣ ತಂತ್ರ’.!
25 December 2024
09:11
ಚಳಿಗಾಲದಲ್ಲಿ ನೆನಸಿದ ಶೇಂಗಾ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
25 December 2024
09:01
ಚಿನ್ನದ ಗಣಿಗಾರಿಕೆ ಪುನರಾರಂಭಿಸಲು ಶಾಸಕ ವೀರೇಂದ್ರ ಪಪ್ಪಿ ಮನವಿ
25 December 2024
07:54
ಮಳೆ ನೀರು ಕೊಯ್ಲು ವಿಧಾನ ಕಡ್ಡಾಯ.!
25 December 2024
07:52
ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆ.!
25 December 2024
07:49
ವಚನ.: -ಗಾವುದಿ ಮಾಚಯ್ಯ .!
25 December 2024
07:47
ಅಂಗವಿಕಲರಿಗೆ ಪ್ರತಿವರ್ಷ ಇಪ್ಪತ್ತು ಲಕ್ಷ ಅನುದಾನ: ಶಾಸಕ ಕೆ.ಸಿ.ವೀರೇಂದ್ರಪಪ್ಪಿ.!
24 December 2024
18:29
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ
24 December 2024
18:25
ಈ ಕಾರಣಕ್ಕೆ ವಾರ್ಡನ್ ಫಯಾಜ್ ಬಾಷಾ ಅಮನಾತ್ತು.!
24 December 2024
18:23
ಕೊನೆಗೂ ರಸ್ತೆ ಅಗಲೀಕರಣಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್.! ಯಾವ ರಸ್ತೆಗಳು ಗೊತ್ತಾ,?
24 December 2024
18:20
ಡಿ.29 ರಂದು ಗೆಜೆಟೆಡ್ ಪ್ರೊಬೆಷನರ್ಸ್ ಮರು ಸ್ಪರ್ಧಾತ್ಮಕ ಪರೀಕ್ಷೆ ಜಾಮರ್ ಅಳವಡಿಕೆ.!
24 December 2024
18:17
ಗ್ರಾಹಕರು ವಸ್ತು ಖರೀದಿಸುವ ಮುನ್ನ ಗುಣಮಟ್ಟ ತಿಳಿದಿರಬೇಕು: ಸತ್ರ ನ್ಯಾಯಾಧೀಶ ರೋಣ ವಾಸುದೇವ್
24 December 2024
18:14
ಗ್ರಾಮ ಆಡಳಿತಾಧಿಕಾರಿ ಹುದ್ದೆ: ಅಂತಿಮ ಅಂಕಪಟ್ಟಿ ಪ್ರಕಟ.!
24 December 2024
18:09
ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಪದ್ಧತಿಯೇ ಇಲ್ಲ – ಕಮಿಷನರ್ ಬಿ.ದಯಾನಂದ್
24 December 2024
18:03
ಶ್ರೀಲಂಕಾದಿಂದ ತಮಿಳುನಾಡಿನ 17 ಮೀನುಗಾರರ ಬಂಧನ, 2 ಹಡಗು ವಶ: ಕೇಂದ್ರಕ್ಕೆ ಸ್ಟಾಲಿನ್ ಪತ್ರ
24 December 2024
18:00
ಬಾಸ್ನೊಂದಿಗೆ ಮಲಗಲು ಒಪ್ಪದ ಪತ್ನಿಗೆ ತ್ರಿಪಲ್ ತಲಾಖ್ ..!!
24 December 2024
17:43
ರಾಜ್ಯದಲ್ಲೇ ಪ್ರಥಮ ಬಾರಿಗೆ ಮೂಳೆ ದಾನ: ಕ್ಯಾನ್ಸರ್ ಪೀಡಿತ 6 ಮಕ್ಕಳಿಗೆ ಹೊಸ ಜೀವನ ನೀಡಿದ ಯುವಕ
24 December 2024
17:21
‘ನಾನು ಕರೀನಾ ಮಗನಾಗಿ ತೆರೆಯ ಮೇಲೆ ನಟಿಸ್ತೇನೆ’- ವಿವಾದ ಸೃಷ್ಟಿಸಿದ ಪಾಕ್ ನಟನ ಹೇಳಿಕೆ
24 December 2024
17:12
ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ : ನಟ ‘ಅಲ್ಲು ಅರ್ಜುನ್’ ಬೌನ್ಸರ್ ಅರೆಸ್ಟ್ !
24 December 2024
16:15
ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಿ.ಟಿ ರವಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲ್
24 December 2024
15:14
ಅಂಬಾನಿ ಪುತ್ರನ ಮದುವೆಗಿಂತಲೂ ಅದ್ದೂರಿಯಾಗಿ ನಡೆಯಲಿದೆ ಅಮೆಜಾನ್ ಸಂಸ್ಥಾಪಕನ ವಿವಾಹ- ಖರ್ಚೆಷ್ಟು ಗೊತ್ತಾ?
24 December 2024
15:05
ಕುಟುಂಬ ಸದಸ್ಯರ ಪ್ರೀತಿಯ ಆಳ ಪರೀಕ್ಷಿಸಲು ತನ್ನದೇ ಕಿಡ್ನ್ಯಾಪ್ ಕತೆ ಕಟ್ಟಿದ ಯುವಕ: ಮುಂದೆ ನಡೆದದ್ದೇ ರೋಚಕ
24 December 2024
14:13
ಬಳ್ಳಾರಿಯಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರ ನಿಧನ
24 December 2024
13:49
ಮುಂಬೈನಲ್ಲಿ ನಿಯಂತ್ರಣ ತಪ್ಪುತ್ತಿದೆ ವಾಯು ಮಾಲಿನ್ಯ – ಮಾರ್ಗಸೂಚಿ ಹೀಗಿದೆ
24 December 2024
13:40
5 ತಿಂಗಳ ನಂತರ ಹಮಾಸ್ ನಾಯಕ ಇಸ್ಮಾಯಿಲ್ ಹತ್ಯೆ ಒಪ್ಪಿಕೊಂಡ ಇಸ್ರೇಲ್
24 December 2024
13:37
‘ಸಿ.ಟಿ ರವಿ ಪ್ರಕರಣ ಸಿಐಡಿಗೆ ಹಸ್ತಾಂತರ’- ಜಿ ಪರಮೇಶ್ವರ್
24 December 2024
12:46