ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪಕ್ಕಾ ಪ್ರೊಫೆಷನಲ್ಸ್ ರೀತಿ ಕೆಲಸ ಮಾಡಿದ್ದಾರೆ. ಕೊಲೆ ಬಳಿಕ ದರ್ಶನ್ ಆ್ಯಂಡ್ ಗ್ಯಾಂಗ್ ತಮ್ಮ ಇಮೇಲ್ ಐಡಿ, ಪಾಸ್ ವರ್ಡ್ ಬದಲಾವಣೆ ಮಾಡಿರೋದು ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ವೇಳೆ ಪಾಸ್ವರ್ಡ್ ಬದಲಾಯಿಸಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಪೊಲೀಸರು ಪಂಚನಾಮೆ ಮಾಡಿದ್ದಾರೆ. ಹಾಗಾದ್ರೆ ಆರೋಪಿಗಳು ಪಾಸ್ ವರ್ಡ್ ಬದಲಾಯಿಸಿದ್ದು ಯಾಕೆ ಅಂತ ನೋಡೋದಾದ್ರೆ… ಆರೋಪಿಗಳ ಪ್ರತಿ ಚಲನವಲನದ ಟೈಮ್ ಲೈನ್ ಇರುತ್ತೆ, ಟೈಮ್ ಲೈನ್ನಲ್ಲಿ ಪ್ರತಿ ಮೂಮೆಂಟ್ ರೆಕಾರ್ಡ್ ಆಗಿರುತ್ತೆ, ಒಂದು ವೇಳೆ ಪೊಲೀಸರು ತನಿಖೆ ನಡೆಸಿದರೆ ಆರೋಪಿಗಳ ಓಡಾಟದ ಸಂಪೂರ್ಣ ಮಾಹಿತಿ ಸಿಗುತ್ತೆ. ಅದ್ರಿಂದ ಇಮೇಲ್ ಐಡಿ ಪಾಸ್ವರ್ಡ್ ಬದಲಾಯಿಸಿರೋ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆರೋಪಿಗಳು ಪಾಸ್ವರ್ಡ್ ಬದಲಾಯಿಸಲು ತಜ್ಞರ ಸಲಹೆ ಪಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಸೈಬರ್ ತಜ್ಞರು ಅಥವಾ ಸೈಬರ್ ವಿಚಾರ ತಿಳಿದಿರುವ ವ್ಯಕ್ತಿಗಳ ನೆರವು ಪಡೆದಿರುವ ಶಂಕೆ ವ್ಯಕ್ತವಾಗಿದೆ. ಅವರ ಮಾಹಿತಿ ಮೇರೆಗೆ ತಮ್ಮ ಇಮೇಲ್ ಐಡಿಗಳನ್ನ ಆರೋಪಿಗಳು ದಿಢೀರ್ ಅಂತ ಬದಲಾಯಿಸಿದ್ದಾರೆ.
