ಬೆಳಗಾವಿ: ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರನ್ನು ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ನಾಮಕರಣ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಸಮಿತಿಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, ಇದರಲ್ಲಿ 10 ಜನ ರಾಜ್ಯಸಭಾ ಸದಸ್ಯರು ಹಾಗೂ 21 ಜನ ಲೋಕಸಭಾ ಸದಸ್ಯರಿದ್ದು, ರಾಧಾ ಮೋಹನ ಸಿಂಗ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದರಿ ನೇಮಕಾತಿ ತಮಗೆ ಸಂತಸ ತಂದಿದೆಯಂದು ಸಂಸದರಾದ ಜಗದೀಶ್ ಶೆಟ್ಟರ ರವರು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
