ನಿಮಗೆ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀ ಕುಡಿದು ತಿಂಡಿ ತಿನ್ನುವ ಅಭ್ಯಾಸ ಇದೆಯಾ? ಹಾಗಿದ್ದರೆ ಮೊದಲು ತಿಂಡಿ ತಿಂದು ಆನಂತರ ಬ್ಲ್ಯಾಕ್ ಟೀ ಕುಡಿಯಿರಿ.
ಬೆಳಗ್ಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಅದೇ ರೀತಿ ಕೆಲವರು ಬೆಳಗ್ಗೆ ತಿಂಡಿ ತಿನ್ನುವ ಮುಂಚೆ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಹಾಲು ಹಾಕಿದ ಚಹಾ ಇಷ್ಟವಾದರೆ ಇನ್ನು ಕೆಲವರಿಗೆ ಬ್ಲ್ಯಾಕ್ ಟೀ ತುಂಬಾ ಇಷ್ಟ. ಆದರೆ ಇಲ್ಲೊಂದು ಸಮಸ್ಯೆ ಇದೆ.
ಏನೆಂದರೆ ಇಡೀ ದಿನವನ್ನು ಆರೋಗ್ಯಕರವಾಗಿ ಕಳೆಯಬೇಕು ಎನ್ನುವವರಿಗೆ ಬೆಳಗಿನ ಸಮಯದಲ್ಲಿ ಬ್ಲ್ಯಾಕ್ ಟೀ ಕುಡಿಯುವುದು ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಹಲವು ಕಾಯಿಲೆಗಳನ್ನು ತರುತ್ತದೆ. ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಆಮ್ಲಿಯತೆ ಅಥವಾ ಅಜೀರ್ಣತೆ
ತಜ್ಞರ ಲೆಕ್ಕಾಚಾರದಲ್ಲಿ ಬ್ಲ್ಯಾಕ್ ಟೀ ಅಥವಾ ಬ್ಲ್ಯಾಕ್ ಕಾಫಿ ತುಂಬಾ ಆಮ್ಲೀಯ ಪ್ರಭಾವವನ್ನು ಹೊಂದಿದ್ದು, ಖಾಲಿ ಹೊಟ್ಟೆ ಯಲ್ಲಿ ಕುಡಿಯುವುದರಿಂದ ದೇಹದ ಆಮ್ಲ ಹಾಗೂ ಆಲ್ಕಲೈನ್ ಸಮತೋಲನವನ್ನು ತಪ್ಪಿಸುತ್ತದೆ. ಇದು ದಿನ ಕಳೆದಂತೆ ಅಸಿಡಿಟಿ ಅಥವಾ ಅಜೀರ್ಣತೆಯನ್ನು ಹೆಚ್ಚು ಮಾಡಬಹುದು.
ನಿರ್ಜಲೀಕರಣ ಎದುರಾಗುತ್ತದೆ
ಬ್ಲ್ಯಾಕ್ ಟೀ ತನ್ನಲ್ಲಿ theophylline ಎಂಬ ಅಂಶವನ್ನು ಹೊಂದಿದ್ದು, ಇದು ದೇಹದಲ್ಲಿ ನಿರ್ಜಲೀಕರಣ ತೊಂದರೆ ಯನ್ನು ಉಂಟು ಮಾಡುತ್ತದೆ. ಪ್ರತಿ ದಿನ ಕುಡಿಯುವ ಅಭ್ಯಾಸ ಇದ್ದವರಿಗೆ ಈ ತೊಂದರೆ ಕಟ್ಟಿಟ್ಟ ಬುತ್ತಿ.
ಮಲಬದ್ಧತೆ
ಯಾವಾಗ ದೇಹದಲ್ಲಿ ನಿರ್ಜಲೀಕರಣ ಎದುರಾಗುತ್ತದೆ ಆ ಸಂದ ರ್ಭದಲ್ಲಿ ಮಲಬದ್ಧತೆ ಕೂಡ ಇದ್ದೇ ಇರುತ್ತದೆ. ಸೇವಿಸಿದ ಆಹಾರ ಕರುಳಿನ ಭಾಗದಲ್ಲಿ ಸರಿಯಾಗಿ ಜೀರ್ಣವಾಗದೆ ಇದ್ದರೆ ಮಲ ವಿಸರ್ಜನೆ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ.
ಹಲ್ಲುಗಳ ಎನಾಮಲ್ ಹಾಳಾಗುತ್ತದೆ
ಬ್ಲ್ಯಾಕ್ ಟೀ ಹೆಚ್ಚು ಅಸಡಿಕ್ಕಾಗಿರುವುದರಿಂದ ಬೆಳಗಿನ ಸಂದ ರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಆಮ್ಲಿಯ ಪ್ರಭಾವ ಹೆಚ್ಚಾಗುತ್ತದೆ ಮತ್ತು ಇದು ಹಲ್ಲುಗಳ ಮೇಲೆ ಪ್ರಭಾವ ಬೀರಿ ಹಲ್ಲುಗಳ ಮೇಲ್ಬಾಗದ ಎನಾಮಲ್ ಹಾಳಾಗು ವಂತೆ ಮಾಡುತ್ತದೆ ಮತ್ತು ಇನ್ನಿತರ ವಸಡುಗಳಿಗೆ ಸಂಬಂಧ ಪಟ್ಟ ಕಾಯಿಲೆಗಳನ್ನು ತರುತ್ತದೆ.
ಹೊಟ್ಟೆ ಉಬ್ಬರ
ಬ್ಲ್ಯಾಕ್ ಟೀ ಕುಡಿಯುವುದರಿಂದ ಗ್ಯಾಸ್ಟಿಕ್ ಆಗುತ್ತದೆ ಎಂದು ಹೇಳುತ್ತಾರೆ. ಇದು ಕ್ರಮೇಣವಾಗಿ ಹೊಟ್ಟೆ ಉಬ್ಬರ ತೊಂದರೆ ಯನ್ನು ತಂದುಕೊಡುತ್ತದೆ. ಇದರ ಆಮ್ಲಿಯ ಪ್ರಭಾವದಿಂದ ಬೇರೆ ಆರೋಗ್ಯಕರ ಆಹಾರಗಳನ್ನು ಸಹ ಸರಿಯಾಗಿ ಸೇವಿಸಲು ಸಾಧ್ಯವಾಗುವುದಿಲ್ಲ.
ಬ್ಲ್ಯಾಕ್ ಟೀ ಕುಡಿಯಲು ಸರಿಯಾದ ಸಮಯ
ನಿಮಗೆ ಬ್ಲ್ಯಾಕ್ ಟೀ ಕುಡಿಯುವ ಬಯಕೆ ಇದ್ದರೆ, ಅದರ ಉತ್ತಮ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು ತಜ್ಞರು ಹೇಳುವ ಹಾಗೆ ಊಟ ಆದ ಒಂದೆರಡು ಗಂಟೆಗಳ ನಂತರದಲ್ಲಿ ಸೇವಿಸುವುದು ಒಳ್ಳೆಯದು.
ಒಂದು ವೇಳೆ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ ಎಂದರೆ ಇದಕ್ಕೆ ಹಾಲು ಮತ್ತು ಸಕ್ಕರೆ ಹಾಕಬೇಡಿ. ಖಾಲಿ ಹೊಟ್ಟೆಯಲ್ಲಿ ಹಾಲು ಬೆರೆಸಿದ ಕಾಫಿ ಅಥವಾ ಟೀ ಹೊಟ್ಟೆಗೆ ತೊಂದರೆ ನೀಡುತ್ತದೆ