ಭಾರತದಲ್ಲಿ ವಿಮಾನಗಳ ತಯಾರಿಕೆ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಕೇಂದ್ರ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ದು ಹೇಳಿದ್ದಾರೆ.
ದೆಹಲಿಯಲ್ಲಿ ನಿನ್ನೆ ನಡೆದ ಸಮಾವೇಶವೊಂದರಲ್ಲಿ ಮಾತನಾಡಿ ಅವರು, ಏರ್‌ಕ್ರಾಫ್ಟ್ ಮ್ಯಾನುಫ್ಯಾಕ್ಟರಿಂಗ್‌ನಲ್ಲಿ ಭಾರತವನ್ನು ವಿಶ್ವದ ಅಡ್ಡೆಯನ್ನಾಗಿ ಮಾಡುವ ಗುರಿ ಇದೆ ಎಂದಿದ್ದಾರೆ.
ಇದಕ್ಕಾಗಿ ಸ್ಪೆಷಲ್ ಪರ್ಪೋಸ್ ವೆಹಿಕಲ್ ಮೂಲಕ ಒಂದು ವಿಶೇಷ ತಂಡ ರಚಿಸುವ ಪ್ಲಾನ್ ಹೊಂದಿರುವುದನ್ನೂ ತಿಳಿಸಿದ್ದಾರೆ. ಸರ್ಕಾರದ ಈ ಗುರಿಯಲ್ಲಿ HAL ಪಾತ್ರ ಮಹತ್ವದ್ದಿರಲಿದೆ. HALA ಯುದ್ಧವಿಮಾನಗಳನ್ನು ತಯಾರಿಸಿರುವ ಅನುಭವ ಇದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.