ದೆಹಲಿ: ಭಾರತ್ ಎಂಬುದು ಭಾರತದ ಸಂವಿಧಾನದಲ್ಲಿ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9 ರಂದು G20 ಔತಣಕೂಟಕ್ಕೆ ಕಳುಹಿಸಿದ ಆಹ್ವಾನ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿದ ಬಲಿಕ ಇಂಡಿಯಾ- ಭಾರತ್ ಹೆಸರು ಬದಲಾವಣೆ ಭಾರೀ ಚರ್ಚೆ ನಡೆಯುತ್ತಿದೆ.
ಇಂಡಿಯಾ ಎಂದರೆ ಭಾರತ, ಅದು ಸಂವಿಧಾನದಲ್ಲಿದೆ. ದಯವಿಟ್ಟು, ಅದನ್ನು ಓದಲು ನಾನು ಎಲ್ಲರನ್ನೂ ಆಹ್ವಾನಿಸುತ್ತೇನೆ ಎಂದು ಜೈಶಂಕರ್ ಹೇಳಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನೋಡಿ ನೀವು ಭಾರತ್ ಎಂದಾಗ, ಅದಕ್ಕೊಂದು ಅರ್ಥ ಇರುತ್ತದೆ. ಅದು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.
ಇಂಡಿಯಾವನ್ನು ಭಾರತ್ ಮತ್ತು ಹಿಂದೂಸ್ತಾನ್ ಎಂದೂ ಕರೆಯಲಾಗುತ್ತದೆ. ಭಾರತೀಯ ಭಾಷೆಗಳಲ್ಲಿ ಮತ್ತು ಇವುಗಳನ್ನು ಸಾರ್ವಜನಿಕರು ಮತ್ತು ಅಧಿಕೃತವಾಗಿಯೂ ಭಾರತ ಎನ್ನುತ್ತಾರೆ ಎಂದರು.