ಮಂಗಳೂರು : ನಗರದ ಕದ್ರಿ ಹಾಗೂ ಜಿಲ್ಲಾ ನ್ಯಾಯಾಲಯದ ಬಳಿ ಉಗ್ರರ ಪರ ಗೋಡೆಬರಹ ಬರೆದಿದ್ದ ಪ್ರಕರಣದಲ್ಲಿ ಮತ್ತೊಬ್ಬನ ಮೇಲೆ ಆರೋಪ ಮಾಡಿ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್), ಲಷ್ಕರ್ ಎ ತೋಯ್ಬಾ ಬೆಂಬಲವಾಗಿ ಗೋಡೆಬರಹ ಬರೆದಿದ್ದಕ್ಕೆ ಸಂಬಂಧಿಸಿದಂತೆ ಎನ್‌ಐಎ ಹೆಚ್ಚುವರಿ ಆರೋಪ ದಾಖಲಿಸುವ ಸಂದರ್ಭ ಗುರುವಾರ ಮತ್ತೊಬ್ಬನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ಸಲ್ಲಿಸಲಾಗಿರುವ 2ನೇ ಪೂರಕ ಚಾರ್ಜ್‌ಶೀಟ್‌ನಲ್ಲಿ, ಎನ್‌ಐಎ ಮತ್ತೋರ್ವ ಅರಾಫತ್ ಅಲಿ ವಿರುದ್ಧ ಆರೋಪ ಹೊರಿಸಿದೆ.
ಈ ಪ್ರಕರಣದಲ್ಲಿ ಬಂಧನದಲ್ಲಿರುವ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ವಿರುದ್ಧ ಪ್ರಕರಣದಲ್ಲಿ ಹೆಚ್ಚುವರಿ ಆರೋಪಗಳನ್ನು ದಾಖಲಿಸಿದೆ. 2020ರ ಜನವರಿಯಲ್ಲಿ ಗೋಡೆಬರಹ ಬರೆಯಲು ಇತರ ಆರೋಪಿಗಳನ್ನು ಅರಾಫತ್ ಪ್ರೇರೆಪಿಸಿದ್ದ. ಈತ 2023ರ ಸೆಪ್ಟೆಂಬರ್ 14ರಂದು ಕೀನ್ಯಾದಿಂದ ಹಿಂದಿರುಗುತ್ತಿದ್ದಾಗ ಡೆಲ್ಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ಐಎಯಿಂದ ಬಂಧಿಸಲ್ಪಟ್ಟಿದ್ದರು.
ಅಬ್ದುಲ್ ಮಥೀನ್ ಮತ್ತು ಮುಸಾವಿರ್ ಹುಸೇನ್ ಎಂಬವೆ ಸೂಚನೆಯನ್ವಯ ಅರಾಫತ್ ಮಂಗಳೂರಿನ ಎರಡು ಕಡೆಗಳಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಗೋಡೆಬರಹ ಬರೆಯಲು ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಇತರರಿಗೆ ಪ್ರೇರೆಪಿಸಿದ್ದಾನೆ ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.