ಮಂಗಳೂರು : ಕೇರಳ ಮೂಲದ ನಕ್ಸಲ್ ಶ್ರೀಮತಿ ಅಲಿಯಾಸ್ ಉನ್ನಿ ಮಾಯಳನ್ನು ಕಾರ್ಕಳ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿ ಕಾರ್ಕಳಕ್ಕೆ ಕರೆತಂದಿದ್ದಾರೆ.
2023 ನವೆಂಬರ್ 8 ರಂದು ಕಣ್ಣೂರಿನಲ್ಲಿ ಉನ್ನಿಮಾಯ ಅರೆಸ್ಟ್ ಆಗಿದ್ದಳು.ಊಟಕ್ಕಾಗಿ ಕಾಡಂಚಿನ ಮನೆಗೆ ಬಂದಿದ್ದಾಗ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದರು. ಒಟ್ಟು 9 ಪ್ರಕರಣಗಳಲ್ಲಿ ನಕ್ಸಲ್ ಉನ್ನಿಮಾಯ ಪೊಲೀಸರಿಗೆ ಬೇಕಾದವಳಾಗಿದ್ದಾಳೆ.
ಸದ್ಯ ಬಾಡಿ ವಾರೆಂಟ್ ಮೇಲೆ ಕರ್ನಾಟಕ ಪೊಲೀಸರು ಕಾರ್ಕಳಕ್ಕೆ ಕರೆ ತಂದು ವಿಚಾರಣೆ ನಡೆಸಿದರು.ಕಾರ್ಕಳ ನಗರ ಠಾಣೆಗೆ ಕರೆ ತಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ತೀವ್ರಗೊಳಿಸಿದ್ದಾರೆ. ಇಂದು ಉನ್ನಿಮಾಯಳನ್ನು ತಾಲೂಕು ಕೋರ್ಟ್ ಮುಂದೆ ಪ್ರೊಡ್ಯೂಸ್ ಮಾಡಲಿರುವುದಾಗಿ ತಿಳಿದುಬಂದಿದೆ.