ಮಂಗಳೂರು: ತಿರುಪತಿಯ ತಲಕೋನಾ ಜಲಪಾತದಲ್ಲಿ ಮಂಗಳೂರು ಮೂಲದ ವಿದ್ಯಾರ್ಥಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ.
ಮೃತ ಸುಮಂತ್ ಸ್ನೇಹಿತರ ಜತೆಗೆ ಟ್ರಿಪ್ಗೆಂದು ಹೋಗಿದ್ದ, ತಲಕೋಣ ಜಲಪಾತಕ್ಕೆ ಧುಮುಕುತ್ತಿರುವರುವುದನ್ನು ಸ್ನೇಹಿತರು ವಿಡಿಯೋ ಮಾಡುತ್ತಿದ್ದರು. ಆದರೆ, ಬಹಳ ಸಮಯವಾದರೂ ಆತ ಕಾಣಿಸಿದ ಕಾರಣ ಆತಂಕಗೊಂಡು ಸಮೀಪದ ಪೊಲೀಸ್ ಠಾಣೆ ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಸುಮಂತ್‌ನ ತಲೆಯು ನೀರಿನ ಅಡಿಯಲ್ಲಿ ಎರಡು ಬಂಡೆಗಳ ನಡುವೆ ಸಿಲುಕಿಕೊಂಡಿದ್ದು, ಮೃತದೇಹವನ್ನು ಜಲಪಾತದಿಂದ ಹೊರತೆಗೆಯಲಾಗಿದೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಮಂತ್ ಚೆನ್ನೈನ ರಾಜೀವ್ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ ಎಂದು ತಿಳಿದುಬಂದಿದೆ.
				
															
                    
                    
                    
                    
                    

































