ಮುಂಬೈ: ಬೇಬಿ’ ಸಿನಿಮಾದ ನಟಿ ವೈಷ್ಣವಿ ಚೈತನ್ಯ ಇದೀಗ ತನ್ನ ಭಾವಿ ಪತಿ, ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸಂದರ್ಶನ ಮಾತುಗಳು ಸಖತ್ ವೈರಲ್ ಆಗುತ್ತಿವೆ.
ಆನಂದ್ ದೇವರಕೊಂಡ, ವಿರಾಜ್‌ಗೆ ನಾಯಕಿಯಾಗುವ ಮೂಲಕ ‘ಬೇಬಿ’ ಚಿತ್ರದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ನಟಿ ವೈಷ್ಣವಿ ಚೈತನ್ಯ. ತಮ್ಮ ಮದುವೆಯ ಬಗ್ಗೆ ಭಾವಿ ಪತಿ ಹೇಗಿರಬೇಕು ಎಂದು ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಟಿ, ಭಾವಿ ಗಂಡನ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲ. ಯಾವುದೇ ಐಶ್ವರ್ಯ ಮತ್ತು ಸೌಂದರ್ಯ ಇಲ್ಲದೇ ಇದ್ರೂ ಪರವಾಗಿಲ್ಲ. ಒಳ್ಳೆಯ ಮನಸಿದ್ದರೆ ಸಾಕು ಎಂದು ಹೇಳಿದ್ದಾರೆ.
ವೈಷ್ಣವಿ ಮಾತು ಕೇಳಿ ಪಡ್ಡೆ ಹುಡುಗರು ದಿಲ್ ಖುಷ್ ಆಗಿದ್ದಾರೆ. ಇನ್ನು ನಟಿಯ ಸರಳತೆಗೆ ಅಭಿಮಾನಿಗಳು ಭೇಷ್ ಎಂದು ಹಾಡಿ ಹೊಗಳಿದ್ದಾರೆ.
ಟಿಕ್ ಟಾಕ್, ರೀಲ್ಸ್ ಮಾಡುತ್ತಿದ್ದ ನಟಿ, ಕಿರುಚಿತ್ರಗಳು, ಕವರ್ ಸಾಂಗ್ಸ್ ಮೂಲಕ ನಟನೆಗೆ ಕಾಲಿಟ್ಟರು. ಬಳಿಕ ಸ್ಟಾರ್ ನಟರ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಿದ್ದರು. ಬಳಿಕ ಬೇಬಿ ಚಿತ್ರಕ್ಕೆ ನಾಯಕಿಯಾಗಿ ಗೆದ್ದು ಬೀಗಿದ್ದರು. ಇದೀಗ ರಾಮ್ ಪೋತಿನೇನಿ ಮುಂದಿನ ಚಿತ್ರಕ್ಕೆ ವೈಷ್ಣವಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.