ಹಿಮಾಚಲ ಪ್ರದೇಶದಲ್ಲಿ 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು 1500 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಘೋಷಿಸಿದ್ದಾರೆ.
ಮುಂದಿನ ಆರ್ಥಿಕ ವರ್ಷದಿಂದ ಮಹಿಳೆಯರಿಗೆ ರಾಜ್ಯ ಸರಕಾರ ಮಾಸಿಕ 1500 ರೂ. ನೀಡಲಾಗುತ್ತದೆ.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ 10 ‘ಖಾತರಿ’ಗಳಲ್ಲಿ ಈ ಯೋಜನೆಯು ಒಂದು ಎಂದು ಸಿಎಂ ಸುಖವಿಂದರ್ ಸಿಂಗ್ ಹೇಳಿದ್ದಾರೆ.