ದೆಹಲಿ: ಐಪಿಎಲ್ 17ನೇ ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದೆ. ಆದರೆ, ಎಪ್ರಿಲ್- ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ಎರಡು ಹಂತದಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
ಮೊದಲ 15 ದಿನದ ವೇಳಾಪಟ್ಟಿಯು ಮೊದಲು ಪ್ರಕಟವಾಗಲಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣೆಯ ಪಟ್ಟಿ ರಿಲೀಸ್ ಆದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ANI ಗೆ ತಿಳಿಸಿದ್ದಾರೆ.