ಮಿಝೋರಾಂ: ಮಿಝೋರಾಂನಲ್ಲಿ ಝಡ್‌ಪಿಎಂ ಪಕ್ಷ ನೂತನ ಸರ್ಕಾರವನ್ನು ರಚಿಸಲು ಮುಂದಾಗಿದೆ. ಝಡ್‌ಪಿಎಂ ಪಕ್ಷವು 40 ಸ್ಥಾನಗಳಲ್ಲಿ 22 ಸ್ಥಾನಗಳಲ್ಲಿ ಗೆಲುವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ . ಅಲ್ಲದೇ ಐದು ಸ್ಥಾನಗಳಲ್ಲಿ ಝಡ್‌ಪಿಎಂ ಮುನ್ನಡೆಯನ್ನು ಸಾಧಿಸಿದೆ.
ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ಝಡ್‌ಪಿಎಂ ಅಭ್ಯರ್ಥಿ ಎದುರು ಮಿಝೋರಾಂ ಮುಖ್ಯಮಂತ್ರಿ ಸೋತಿದ್ದು ಮುಖಭಂಗವಾಗಿದೆ.ಮುಖ್ಯಮಂತ್ರಿ ಝೊರಾಂಥಾಂಗ ವಿರುದ್ಧ ಝಡ್‌ಪಿಎಂ ಅಭ್ಯರ್ಥಿ ಲಾಲತನಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಝಡ್‌ಪಿಎಂನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್‌ನಲ್ಲಿ MNF ಅಭ್ಯರ್ಥಿಯನ್ನು 2,982 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಆಡಳಿತಾರೂಢ ಎಂಎನ್‌ಎಫ್ ಏಳು ಸ್ಥಾನಗಳನ್ನು ಗೆದ್ದಿದ್ದು ಪ್ರಸ್ತುತ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.