ನವದೆಹಲಿ: ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಅಕ್ಟೋಬರ್ 8ರಂದು ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 74ರ ಹರೆಯದ ನಟ-ರಾಜಕಾರಣಿಯ ಕುರಿತು ಮಾತನಾಡಿದ ವೈಷ್ಣವ್, “ಮಿಥುನ್ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ!” ಎಂದು ತಿಳಿಸಿದ್ದಾರೆ. 2021ರಲ್ಲಿ ಬಿಜೆಪಿ ಸೇರಿದ ಚಕ್ರವರ್ತಿ ಅವರು ರಾಜ್ಯಸಭೆಯಲ್ಲಿ ಟಿಎಂಸಿ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.
