ನವದೆಹಲಿ: ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಎಪಿ , ಕಾನೂನುಬಾಹಿರವಾಗಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಅಲ್ಲದೇ ಕೇಜ್ರಿವಾಲ್ ಅವರನ್ನು ಬಂಧಿಸುವ ಸಂಚು ಎಂದು ಆರೋಪಿಸಿದೆ. ಇನ್ನೇನು ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಪ್ರಚಾರದಿಂದ ದೂರವಿಡುವಂತೆ ಮಾಡುವ ತಂತ್ರ ಎಂದು ಹೇಳಿದೆ.
ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎರಡು ಬಾರಿ ಸಮನ್ಸ್ ನೀಡಲಾಗಿದ್ದು ಇದಕ್ಕೆ ಹಾಜರಾಗದ ಹಿನ್ನಲೇ ಇದೀಗ ಮತ್ತೆ ಮೂರನೇ ಸಮನ್ಸ್ ನೀಡಲಾಗಿದೆ ಎನ್ನಲಾಗಿದೆ.
ಮೊದಲ ಬಾರಿಗೆ ನವೆಂಬರ್ 2 ರಂದು ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಬಳಿಕ ಡಿ. 21ರಂದು ಸಮನ್ಸ್ ಜಾರಿ ಮಾಡಲಾಗಿತ್ತು . ಎರಡೂ ಸಮನ್ಸ್ ನೀಡಿದರು ಇಡಿ ಮುಂದೆ ಕ್ರೇಜಿವಾಲ್ ಹಾಜರಾಗಿರಲಿಲ್ಲ. ಡಿಸೆಂಬರ್ 21 ರಂದು, ಇಡಿಯಿಂದ ಸಮನ್ಸ್ ಬರುವ ಮುಂಚೆಯೇ, ಕೇಜ್ರಿವಾಲ್ ವಿಪಸ್ಸ ನಾಗೆ ಹೋಗಿದ್ದ ರು ಇದಾದ ಬಳಿಕ ಡಿ. 30 ರಂದು ಮರಳಿದರು. ಕೇಜ್ರಿವಾಲ್ ಅವರು ತನಿಖಾಧಿಕಾರಿಗೆ ಪತ್ರ ಬರೆದು ತಮ್ಮ ವಿರುದ್ಧ ಖುದ್ದು ಹಾಜರಾತಿಗಾಗಿ ನೀಡಿರುವ ನೋಟಿಸ್ ಕಾನೂನಿಗೆ ಅನುಸಾರವಾಗಿಲ್ಲ ಮತ್ತು ಅದನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರು ತನಿಖಾ ಏಜೆನ್ಸಿಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ. ಆದರೆ ತನಿಖಾ ಏಜೆನ್ಸಿಯ ಉದ್ದೇಶ ತನಿಖೆ ನಡೆಸುವುದಲ್ಲಾ ಬದಲಾಗಿ ಬಂಧಿಸುವುದು ಉದ್ದೇಶವಾಗಿದೆ ಹಾಗಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಪಕ್ಷ ಹೇಳಿದೆ.
				
															
                    
                    
                    

































