ಪೋರ್ಟ್ ಮೊರೆಸ್ಬಿ:ಪ್ರಧಾನಿ ನರೇಂದ್ರ ಮೋದಿ ಜಪಾನ್‌ನಲ್ಲಿ ಜಿ7 ಶೃಂಗಸಭೆಯನ್ನು ಮುಗಿಸಿ, ಆ ಬಳಿಕ ಮೂರು ರಾಷ್ಟ್ರದ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಹಿನ್ನಲೇಯಲ್ಲಿ ಎರಡನೇ ಹಂತದ ಭಾಗವಾಗಿ ಭಾನುವಾರ ಪಪುವಾ ನ್ಯೂಗಿನಿಗೆ ಬಂದಿಳಿದಿದ್ದು,ಪ್ರಧಾನಿ ಮೋದಿ ಐತಿಹಾಸಿಕ ಭೇಟಿಯಿಂದ ಪಪುವಾ ನ್ಯೂಗಿನಿಯಾ ದೇಶ ಅಚ್ಚರಿಯ ಜೊತೆಗೆ ಸಂಭ್ರಮ ಪಟ್ಟುಕೊಂಡಿದೆ. ಈ ವೇಳೆ ಪ್ರಧಾನಿ ಜೇಮ್ಸ್ ಮರಾಪೆ ಅವರು ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು. ಇದೀಗ ಈ ವಿಡೀಯೊ ಸಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತ ಇದೆ.
ಇನ್ನೂ ಪ್ರಧಾನಿ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆ ಎಂದು ಪ್ರಧಾನಿ ಜೇಮ್ಸ್ ಮರಾಪೆ ಹೇಳಿದ್ದು ಬಹಳ ಅದ್ದೂರಿಯಾಗಿ ಕರೆದುಕೊಂಡರು. ದೊಡ್ಡ ದೊಡ್ಡ ನಾಯಕರ ಭೇಟಿಯ ನಂತರ ಮೋದಿಯವರನ್ನು ಇತರ ಅಧಿಕಾರಿಗಳಿಗೆ ಪರಿಚಯಿಸಲಾಯಿತು. ಹಲವರು ಗಣ್ಯರು ಮೋದಿಯ ಭೇಟಿಗಾಗಿ ಕಾಯುತ್ತಿದ್ದು, ಭಾರತೀಯ ವಲಸಿಗರು ಭವ್ಯವಾದ ಸ್ವಾಗತ ನೀಡಿದರು. ಅವರು ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು. ಪ್ರಧಾನಿ ಜೇಮ್ಸ್ ಮರಾಪೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಫೋಟೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.