ಶಾಜಾಪುರ : ವಿವಾದವೆಂದರೆ ರಾಹುಲ್ ಗಾಂಧಿ ಎಂಬ ಅರ್ಥ ಎನ್ನುವಂತಾಗಿದೆ. ಈ ವಿವಾದಗಳಿಗೂ ರಾಹುಲ್ ಗಾಂಧಿಯವರಿಗೂ ಅವಿನಾಭಾವ ಸಂಬಂಧವಿದೆ ಎನ್ನಲಾಗ್ತಿದೆ.
ಹೇಳಿಕೆ ಮೂಲಕ ಅಥವಾ ವರ್ತನೆ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏನಾದರೂ ಒಂದು ಯಡವಟ್ಟು ಅಥವಾ ವಿವಾದ ಸೃಷ್ಟಿಸುತ್ತಾರೆ. ಈಗ ರಾಹುಲ್ ಗಾಂಧಿ ಹೇಳಿರುವ ಮತ್ತೊಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಪ್ರಧಾನಿ ಮೋದಿ ಮಾತು ಕೇಳಿ ದೇಶದ ಜನರು ಜೈ ಶ್ರೀರಾಮ್ ಘೋಷಣೆ ಕೂಗಿದರೆ ಹಸಿವಿನಿಂದ ಸಾಯುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜನರು ಇಡೀ ದಿನ ತಮ್ಮ ಫೋನ್’ನಲ್ಲಿ ಕುಳಿತು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ. ನೀವು ಇದನ್ನ ಮಾಡುವಾಗ, ನೀವು ಹಸಿವಿನಿಂದ ಸಾಯುತ್ತೀರಿ” ಎಂದು ಗಾಂಧಿ ಹೇಳಿದ್ದಾರೆ.