ನವದೆಹಲಿ: ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನಸ್ಥರಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಟೀಕಿಸಿದ್ದಾರೆ. ಅವರಿಗೆ ದೇವರಲ್ಲಿ ಅಷ್ಟೊಂದು ನಂಬಿಕೆ ಇದ್ದರೆ ಆ ಧ್ಯಾನವನ್ನು ಮನೆಯಲ್ಲೇ ಮಾಡಬಹುದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.`
ಮೋದಿಯವರು ಕನ್ಯಾಕುಮಾರಿಗೆ ಹೋಗಿ ನಾಟಕ ಮಾಡುತ್ತಿದ್ದಾರೆ. ಅವರು ಧ್ಯಾನ ಮಾಡುವ ವೇಳೆ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಲ್ಲಿ ಇರಿಸಬೇಕು. ಇದರಿಂದ ಸಾರ್ವಜನಿಕರ ಸಾಕಷ್ಟು ಹಣ ಪೋಲಾಗುತ್ತದೆ. ನಿಮ್ಮ ‘ಶೋ’ ದೇಶಕ್ಕೆ ಹಾನಿ ಮಾಡುತ್ತದೆ ಎಂದು ಖರ್ಗೆ ಹೇಳಿದರು.
ಪ್ರಧಾನಿ ಮೋದಿಯವರು ಏನೇ ಹೇಳಿದರೂ ದೇಶದ ಜನತೆ ಅವರ ನಾಯಕತ್ವವನ್ನು ಒಪ್ಪದ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿ ಆಂಧ್ರದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬಹುದು. ಆದರೆ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಉತ್ತರಪ್ರದೇಶದಲ್ಲಿಯೂ ಮೈತ್ರಿಯಿಂದಾಗಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.