ನ್ಯೂಯಾರ್ಕ್: ನೊವಾಕ್ ಜೊಕೊವಿಕ್ ಯುಎಸ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ವಿರುದ್ಧ 6-3, 7-6(7-5), 6-3 ಸೆಟ್ಗಳಿಂದ ಗೆದ್ದು, ನಾಲ್ಕನೇ ಯುಎಸ್ ಓಪನ್ ಮತ್ತು 24ನೇ ಪ್ರಶಸ್ತಿಗೆ ಮುತ್ತಿಕ್ಕಿದರು.
ಈ ಮೂಲಕ ಆಧುನಿಕ ಟೆನಿಸ್ ಜಗತ್ತಿನಲ್ಲಿ ಸೆರೆನಾ ವಿಲಿಯಮ್ಸ್ (23 ಸಿಂಗಲ್ಸ್ ಟ್ರೋಫಿ) ಅವರ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನ ದಾಖಲೆ ಮುರಿದ ನೊವಾಕ್ ಟೆನಿಸ್ ಲೋಕದಲ್ಲಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ಮಾರ್ಗರೆಟ್ ಕೋರ್ಟ್ (24) ದಾಖಲೆ ಸರಿಗಟ್ಟಿದರು.
2021 ರ ಯುಎಸ್ ಓಪನ್ನಲ್ಲಿ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಮೆಡ್ವೆಡೆವ್ ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದ್ದರು.